ಮುಂಡೋಳು ಕ್ಷೇತ್ರ ಜೀರ್ಣೋದ್ಧಾರ: ಸಭೆ 12ರಂದು
ಮುಳ್ಳೇರಿಯ: ಕಾರಡ್ಕ ಮುಂ ಡೋಳು ಶ್ರೀ ದುರ್ಗಾಪರಮೇಶ್ವರಿ, ಮಹಾವಿಷ್ಣು, ಶಾಸ್ತಾರ ದೇವಸ್ಥಾನದ ಜೀರ್ಣೋದ್ಧಾರ ಕಾಮಗಾರಿಗಳಿಗೆ ಚಾಲನೆ ನೀಡುವುದಕ್ಕಾಗಿ ಈ ತಿಂಗಳ 12ರಂದು ಬೆಳಿಗ್ಗೆ 10ಕ್ಕೆ ಕ್ಷೇತ್ರ ಸಭಾಂಗಣದಲ್ಲಿ ಸಭೆ ನಡೆಯಲಿದೆ. ಇದರಲ್ಲಿ ಜೀರ್ಣೋದ್ಧಾರ ಸಮಿತಿ ರೂಪೀಕರಣ ನಡೆಯಲಿದ್ದು, ಭಕ್ತರು, ಸ್ಥಳೀಯರು, ಪ್ರಾದೇಶಿಕ ಸಮಿತಿ ಸದಸ್ಯರು, ಕುಟುಂಬಶ್ರೀ ಸದಸ್ಯೆಯರು ಸಹಿತ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸ ಬೇಕೆಂದು ಚೆಯರ್‌ಮ್ಯಾನ್ ಎ.ಬಿ. ರಘುರಾಮ ಬಲ್ಲಾಳ್ ಹಾಗೂ ಕ್ಷೇತ್ರ ಟ್ರಸ್ಟಿ ಬೋರ್ಡ್ ಸದಸ್ಯರು ವಿನಂತಿಸಿದ್ದಾರೆ.