ಮುಂದುವರಿದ ಕಾಡಾನೆಗಳ ಹಾವಳಿ : ಭಾರೀ ಕೃಷಿ ನಾಶ

ಕಾನತ್ತೂರು: ಮುಳಿಯಾರು ಪಂಚಾಯತ್‌ಗೊಳಪಟ್ಟ ಕಾನತ್ತೂರು ಮತ್ತು ಪರಿಸರ ಪ್ರದೇಶಗಳಲ್ಲಿ ಕಾಡಾ ನೆಗಳ ಹಾವಳಿ ಮತ್ತೆ ತಲೆಯೆತ್ತಿದೆ.

ಈ ಪ್ರದೇಶದ ಕಡಲಾಯಿ ಯಲ್ಲಿ ರಾತ್ರಿ ವೇಳೆ ಕಾಡಾನೆಗಳ ಹಿಂಡು ನುಗ್ಗಿ ಕೃಷಿ ತೋಟಗಳನ್ನು ಧ್ವಂಸಗೊಳಿಸಿದೆ. ರಾಜನ್, ಚಿಂ ಡನ್ ನಾಯರ್, ಕೆ.ಪಿ. ಶಶಿಧರನ್, ಗೋಪಾಲನ್, ಪ್ರಶಾಂತ್, ಕೆ.ಪಿ. ಚಿದಾನಂದನ್ ಎಂಬವರ ತೋಟಗಳಿಗೆ ಕಾಡಾನೆಗಳು ನುಗ್ಗಿ  ಧ್ವಂಸಗೊಳಿಸಿವೆ.

ಎರಡು ಕಾಡಾನೆಗಳು ತಮ್ಮ ತೋಟಗಳಿಗೆ ನುಗ್ಗಿ ತೋಟದಲ್ಲಿದ್ದ ಅಢಿಕೆ ಮತ್ತು ಬಾಳೆ ಕೃಷಿಗಳು ಮತ್ತು ತೋಟಗಳಿಗೆ ನೀರು ಹಾಯಿಸುವ ಕೊಳವೆಗಳನ್ನು ತುಳಿದು ನಾಶಗೊಳಿಸಿದೆ. ಇದರಿಂದ ಭಾರೀ ನಷ್ಟ ಉಂಟಾಗಿದೆ. ಕಾಡಿನಿಂದ ಊರಿಗೆ ನಗ್ಗಿ ಕೃಷಿ ನಾಶಗೊಳಿಸುವ ಕಾಡಾನೆಗಳನ್ನು ಕಾಡಿಗೆ ಅಟ್ಟಲು ಅಗತ್ಯದ ಕ್ರಮ ಕೈಗೊಳ್ಳುವಂತೆ ಊರವರು ಆಗ್ರಹಪಟ್ಟಿದ್ದಾರೆ.

RELATED NEWS

You cannot copy contents of this page