ಪೈವಳಿಕೆ: ಭೂಮಾಲಿಕರ ದಬ್ಬಾಳಿಕೆ ವಿರುದ್ಧ ಹೋರಾಡಿ ಜೀವ ಕಳೆದು ಕೊಂಡ ಪೈವಳಿಕೆ ನಿವಾಸಿಗಳಾದ ಸುಂದರ ಶೆಟ್ಟಿ, ಮಹಾಬಲ ಶೆಟ್ಟಿ, ಚೆನ್ನಪ್ಪ ಶೆಟ್ಟಿ ಸಹೋದರರ ಹುತಾತ್ಮ ಸಂಸ್ಮರಣೆ ವಾರ್ಷಿಕ ಕಾರ್ಯಕ್ರಮವನ್ನು ಪೈವಳಿಕೆಯಲ್ಲಿ ಸಿಪಿಎಂ ರಾಜ್ಯ ಸಮಿತಿ ಸದಸ್ಯ ನ್ಯಾಯವಾದಿ ಕೆ. ಅನಿಲ್ ಕುಮಾರ್ ಉದ್ಘಾಟಿಸಿದರು. ೬೮ನೇ ಹುತಾತ್ಮ ದಿನಾಚರಣೆ ಅಂಗವಾಗಿ ಪೈವಳಿಕೆ ಪೇಟೆಯಲ್ಲಿ ಮೆರವಣಿಗೆ, ಸಂಸ್ಮರಣೆ ಸಮ್ಮೇಳನ ನಡೆಸಲಾಯಿತು. ಏರಿಯಾ ಕಾರ್ಯದರ್ಶಿ ಸಿಜಿ ಮ್ಯಾಥ್ಯು ಅಧ್ಯಕ್ಷತೆ ವಹಿಸಿದರು. ಜಿಲ್ಲಾ ಸೆಕ್ರಟರಿ ಯೇಟ್ ಸದಸ್ಯ ಕೆ.ಆರ್. ಜಯಾನಂದ, ಜಿಲ್ಲಾ ಸಮಿತಿ ಸದಸ್ಯ ಸಿ.ಎ. ಸುಬೈರ್, ಬೇಬಿ ಶೆಟ್ಟಿ, ಹಾರೀಸ್ ಪೈವಳಿಕೆ, ವಿನಯ ಕುಮಾರ್, ಪುರುಷೋತ್ತಮ ಬಳ್ಳೂರು, ಅಶೋಕ ಭಂಡಾರಿ, ಬಶೀರ್ ಬಿ.ಎ. ಮಾತನಾಡಿ ದರು. ಅಬ್ದುಲ್ ರಸಾಕ್ ಚಿಪ್ಪಾರು ಸ್ವಾಗತಿಸಿದರು. ಕಾಯರ್ಕಟ್ಟೆ ಯಿಂದ ಬ್ಯಾಂಡ್ಮೇಳದೊಂದಿಗೆ ಆರಂಭಗೊಂಡ ಮೆರವಣಿಗೆ ಪೈವಳಿಕೆ ಪೇಟೆಯಲ್ಲಿ ಸಮಾಪ್ತಿಗೊಂಡಿತು. ಹುತಾತ್ಮ ಮಂಟಪದಲ್ಲಿ ಪುಷ್ಪಾರ್ಚನೆ, ಧ್ವಜಾರೋಹಣ ನಡೆಯಿತು. ಪೈವಳಿಕೆ ಲೋಕಲ್ ಕಾರ್ಯದರ್ಶಿ ಎಂ. ಚಂದ್ರನಾಯ್ಕ್ ವಂದಿಸಿದರು





