ಮಂಜೇಶ್ವರ ಅಬಕಾರಿ ಚೆಕ್‌ಪೋಸ್ಟ್ ತಲಪಾಡಿಗೆ ಸ್ಥಳಾಂತರಿಸಲು ಸಿದ್ಧತೆ

ಮಂಜೇಶ್ವರ: ಹೊಸಂಗಡಿ ಬಳಿಯ ವಾಮಂಜೂರಿನಲ್ಲಿ ಕಾರ್ಯಾಚರಿಸುತ್ತಿರುವ ಮಂಜೇಶ್ವರ ಅಬಕಾರಿ ಚೆಕ್‌ಪೋಸ್ಟ್ನ್ನು ತಲಪಾಡಿಗೆ ಸ್ಥಳಾಂತರಿಸಲು ಸಿದ್ದತೆ ನಡೆಸಲಾಗು ತ್ತಿದೆ. ಹಲವಾರು ವರ್ಷಗಳಿಂದ ವಾಮಂಜೂರಿನಲ್ಲಿ ಚೆಕ್‌ಪೋಸ್ಟ್ ಕಚೇರಿ ಕಂಟೈನರ್‌ನಲ್ಲಿ ಕಾರ್ಯಾ ಚರಿಸುತ್ತಿದೆ. ಆದರೆ ಕಚೇರಿಗೆ ಸ್ವಂತ ಕಟ್ಟಡ, ಶೌಚಾಲಯ, ವಾಸಮಾಡಲು ವ್ಯವಸ್ಥೆ ಇಲ್ಲದೆ ಉದ್ಯೋಗಸ್ಥರು ಸಂಕಷ್ಟಕ್ಕೀಡಾಗಿದ್ದಾರೆ. ಈ ಪರಿಸರದ ಬಾಡಿಗೆ ಕ್ವಾರ್ಟರ್ಸ್ನಲ್ಲಿ ಉದ್ಯೋಗಸ್ಥರು ವಾಸವಾಗಿದ್ದಾರೆ. ಹೆದ್ದಾರಿ ಅಭಿವೃದ್ಧಿಗೊಂಡ ಬಳಿಕ ವಾಸ ಸ್ಥಳಕ್ಕೆ ಹೊಸಂಗಡಿ ಮೂಲಕ ಒಂದು ಕಿಲೋ ಮೀಟರ್ ಸುತ್ತು ವರಿದು ತೆರಳಬೇಕಾಗುತ್ತಿದೆ. ವಾಹನ ತಪಾಸಣೆ ಹೆದ್ದಾರಿಯಲ್ಲಿಯೇ ನಡೆಸಬೇಕಾಗುತ್ತಿದ್ದು ಹೆದ್ದಾರಿ ಮೂಲಕ ಅಪರಿಮಿತ ವಾಹನ ಸಂಚರಿಸುವ ವೇಳೆ ತಪಾಸಣೆ ಅಪಾಯಕ್ಕೆ ಕಾರಣವಾಗುತ್ತಿದೆ. ತಲಪಾಡಿ ಅರಣ್ಯ ಇಲಾಖೆ ಚೆಕ್‌ಪೋಸ್ಟ್ ಬಳಿಯಲ್ಲಿ ಸ್ವಂತ ಜಾಗವಿದ್ದರೂ ಸ್ವಂತ ಕಟ್ಟಡ ಇನ್ನೂ ಮರೀಚಿಕೆಯಾಗಿದೆ. ವಾಮಂಜೂರಿ ನಲ್ಲಿ ಹೆದ್ದಾರಿಯಲ್ಲಿಯೇ ವಾಹನ ತಪಾಸಣೆಗೆ ಸಮಸ್ಯೆ ಉಂಟಾಗುತ್ತಿರುವ ಹಿನ್ನೆಲೆಯಲ್ಲಿ ಇಲ್ಲಿಂದ ತಲಪಾಡಿಯಲ್ಲಿರುವ ಸ್ಥಳದಲ್ಲಿ ಕಂಟೈನರ್ ಮೂಲಕ ಹೊಸ ಕಚೇರಿಗೆ ತಯಾರಿ ನಡೆಸುತ್ತಿದ್ದಾರೆ. ಒಂದು ಕಚೇರಿ ಹಾಗೂ ಇನ್ನೊಂದು ವಿಶ್ರಾಂತಿ ಪಡೆಯಲು ಹೀಗೆ ಒಟ್ಟು ಎರಡು ಕಂಟೈನರ್‌ನ್ನು ತರಲಾಗಿದೆ. ಇನ್ನು ಕಂಟೈರ್‌ನೊಳಗೆ ಕಚೇರಿಗೆ ಬೇಕಾದ ಕೊಠಡಿಗಳನ್ನು ನಿರ್ಮಿಸುವ ಕಾಮಗಾರಿ ನಡೆಸಬೇಕಾಗಿದೆ. ಕರ್ನಾಟಕ ಗಡಿ ಪ್ರದೇಶವಾದ ತಲಪಾಡಿ ಮೂಲಕ ಕಾಸರಗೋಡು ಭಾಗಕ್ಕೆ ವಾಹನಗಳ ಮೂಲಕ ವ್ಯಾಪಕ ಎಂ.ಡಿ.ಎA.ಎ ಸಹಿತ ವಿವಿಧ ಮಾದಕ ಪದಾರ್ಥ ರವಾನೆಯಾಗುತ್ತಿದ್ದು, ವಾಮಂಜೂರು ಚೆಕ್‌ಪೋಸ್ಟ್ನಲ್ಲಿ ಹಲವು ಭಾರಿ ವಶಪಡಿಸಲಾಗಿದೆ. ನೂತನ ಕಚೇರಿಯನ್ನು ವಿವಿಧ ಸೌಲಭ್ಯಗಳೊಂದಿಗೆ ವ್ಯವಸ್ಥಿತ ರೀತಿಯಲ್ಲಿ ನಿರ್ಮಿಸಬೇಕಾಗಿದೆ.

RELATED NEWS

You cannot copy contents of this page