ಮುಂದುವರಿಯುತ್ತಿರುವ ಜಿಲ್ಲಾ ಶಾಲಾ ಕಲೋತ್ಸವ : ನಿನ್ನೆ ಕಾಸರಗೋಡು ಉಪಜಿಲ್ಲೆಗೆ ದ್ವಿತೀಯ ಸ್ಥಾನ
ಹೊಸದುರ್ಗ: ಕಂದಾಯ ಜಿಲ್ಲಾ ಶಾಲಾ ಕಲೋತ್ಸವ ಮುಂದುವರಿಯುತ್ತಿರುವಂತೆ ನಿನ್ನೆ ನಡೆದ ಸ್ಪರ್ಧೆಗಳಲ್ಲಿ ಕಾಸರಗೋಡು ಉಪಜಿಲ್ಲೆ 409 ಅಂಕ ಪಡೆದು ದ್ವಿತೀಯ ಸ್ಥಾನದಲ್ಲಿದೆ. 438 ಅಂಕ ಪಡೆದ ಹೊಸದುರ್ಗ ಉಪಜಿಲ್ಲೆ ಪ್ರಥಮ ಸ್ಥಾನದಲ್ಲಿದೆ. ಬೇಕಲ, ಚೆರ್ವತ್ತೂರು ಉಪಜಿಲ್ಲೆಗಳು 407 ಅಂಕ ಪಡೆದು ತೃತೀಯ ಸ್ಥಾನದಲ್ಲಿದೆ.
ಹೈಯರ್ ಸೆಕೆಂಡರಿ ಗಂಡುಮಕ್ಕಳ ಭರತನಾಟ್ಯದಲ್ಲಿ ಅಗಲ್ಪಾಡಿ ಎಸ್ ಎಪಿಎಚ್‌ಎಸ್‌ನ ಕೆ.ಎಸ್. ಭರತ್ ಕೃಷ್ಣ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾನೆ. ಉಪನ್ಯಾಸ ಸ್ಪರ್ಧೆಯಲ್ಲಿ ಎಡನೀರು ಸ್ವಾಮೀಜೀಸ್ ಶಾಲೆಯ ಭಾವನಾ ನಾಯರ್, ಮಾಪ್ಪಿಳ್ಳ ಪಾಟ್‌ನಲ್ಲಿ ಪೆರಡಾಲ ಜಿಎಚ್‌ಎಸ್‌ನ ಮುಹಮ್ಮದ್ ಸಿನಾನ್, ಅರಬಿಕ್ ಸಂಭಾಷಣೆಯಲ್ಲಿ ಮೊಗ್ರಾಲ್ ಜಿವಿಎಚ್‌ಎಸ್‌ಎಸ್‌ನ ಖದೀಜತ್ ಸಹ್‌ಲ, ಅಮ್ನ ಫಾತಿಮ ಪ್ರಥಮ ಸ್ಥಾನ ಗಳಿಸಿದ್ದಾರೆ.