ಮುಖಮರೆಸಿ ನಡೆಯಬೇಕಾದ ಸ್ಥಿತಿ ಮಾರ್ಕಿಸ್ಟ್ ಕಾರ್ಯಕರ್ತರಿಗಿದೆ- ಸೋಮಶೇಖರ ಜೆ.ಎಸ್.

ಉಪ್ಪಳ: ಪಿಣರಾಯಿ ವಿಜಯನ್ ಹಾಗೂ ಹೊಗಳುಭಟರ ದರ್ಬಾರ್ ದೆಸೆಯಿಂದ ನಿಷ್ಟಾವಂತ ಮಾರ್ಕಿಸ್ಟ್ ಕಾರ್ಯಕರ್ತರು ಟವೆಲ್‌ನಿಂದ ಮುಖ ಮುಚ್ಚಿ ನಡೆಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸೋ ಮಶೇಖರ ಜೆ.ಎಸ್. ಆರೋಪಿಸಿದರು. ಮಂಗಲ್ಪಾಡಿ ಮಂಡಲದ 13ನೇ ಮುಟ್ಟಂ ವಾರ್ಡ್ ಕಾಂಗ್ರೆಸ್ ಕುಟುಂಬ ಸಂಗಮ ಉದ್ಘಾಟಿಸಿ ಅವರು ಮಾತನಾಡಿದರು. ಆಡಳಿತದ ಸಕಲ ವಲಯದಲ್ಲೂ ದಯನೀಯ ವೈಫಲ್ಯದ ಜೊತೆಗೆ ಭ್ರಷ್ಟಾಚಾರ, ಸ್ವಜನ ಪಕ್ಷಪಾತ, ಗೂಂಡಾಗಿರಿ, ಗಾಂಜಾ ಮಾಫಿಯಾಗಳ ಮೆರೆದಾಟದಿಂದ ಜನರು ಅಸಹನೆ ಗೊಂಡಿದ್ದು, ಈ ಸರಕಾರವನ್ನು ಕಿತ್ತೆಸೆದು ಯುಡಿಎಫ್ ನೇತೃತ್ವದಲ್ಲಿ ಜನಪರ ಸರಕಾರವನ್ನು ಆಡಳಿತಕ್ಕೆ ತರಲು ಕಾರ್ಯಕರ್ತರು ಮುಂದಾಗಬೇಕೆಂದು ಅವರು ನುಡಿದರು.

ಸಂಘಪರಿವಾರಕ್ಕೆ ಕೇರಳದಲ್ಲಿ ಪಿಣರಾಯಿ ವಿಜಯನ್ ಪೋಷಕರಾಗಿ ಕಾರ್ಯನಿರ್ವಹಿಸುತ್ತಿದ್ದು, ಕೇಂದ್ರದಲ್ಲಿ ಮೋದಿ ಸರಕಾರ ಅಂಬಾನಿ, ಅದಾನಿ ಯಂತವರ ಚಾಕ್ರಿ ಕೆಲಸವನ್ನು ಮಾಡು ತ್ತಿರುವುದಾಗಿ ಅವರು ಆರೋಪಿಸಿದರು. ಮಂಜೇಶ್ವರ ಬ್ಲೋಕ್ ಕಾಂಗ್ರೆಸ್ ಅಧ್ಯಕ್ಷ ಮುಹಮ್ಮದ್ ಡಿಎಂಕೆ ಮುಖ್ಯ ಅತಿಥಿ ಯಾಗಿದ್ದರು. ಇದೇ ವೇಳೆ ಕುಂಞಾ ಮಿನ ಹಾಗೂ ಅವರ ಪತಿ ಮೊಯ್ದೀನ್ ಕುಟ್ಟಿ ಮತ್ತು ಇತರ ಆರು ಮಂದಿ ಕಾಂಗ್ರೆಸ್ ಸದಸ್ಯತ್ವ ಸ್ವೀಕರಿಸಿದರು. ಮಂಡಲ ಕಾಂಗ್ರೆಸ್ ಅಧ್ಯಕ್ಷ ಬಾಬು ಬಂದ್ಯೋಡು ಅಧ್ಯಕ್ಷತೆ ವಹಿಸಿದರು. ಶಾಫಿ, ಫಾರೂಕ್, ಅಶ್ರಫ್, ಬಶೀರ್, ಜಾವಿದ್, ಯೂಸಫ್, ಮುಹಮ್ಮದ್ ಸೀಗಂದಡಿ, ಇಬ್ರಾಹಿಂ, ಹನೀಫ್ ಉಪಸ್ಥಿತರಿದ್ದರು. ಮೊಯ್ದೀನ್ ಕುಟ್ಟಿ, ಮೂಸಾ ಬಾವುಟ್ಟಿ, ಮೂಸಾ ಕುನ್ನಿಲ್, ಮುಹಮ್ಮದ್ ಮೋನು, ಯೂಸುಫ್, ಮುಬಶಿರ್ ಪಕ್ಷಕ್ಕೆ ಸೇರ್ಪಡೆಯಾದರು.

Leave a Reply

Your email address will not be published. Required fields are marked *

You cannot copy content of this page