ಮುಖ್ಯಮಂತ್ರಿ ರಾಜೀನಾಮೆಗೆ ಒತ್ತಾಯಿಸಿ ಕಾಂಗ್ರೆಸ್‌ನಿಂದ ವಿವಿಧೆಡೆ ಪಂಜಿನ ಮೆರವಣಿಗೆ

ಬದಿಯಡ್ಕ: ರಾಜ್ಯದಲ್ಲಿ ಜನದ್ರೋಹ ಆಡಳಿತ ನಡೆಸುವ ಸರಕಾರದ ಮುಖ್ಯ ಮಂತ್ರಿ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ಬದಿಯಡ್ಕ ಪೇಟೆಯಲ್ಲಿ ಬದಿ ಯಡ್ಕ ಮಂಡಲ ಕಾಂಗ್ರೆಸ್ ನೇತೃತ್ವದಲ್ಲಿ ಪಂಜಿನ ಮೆರವಣಿಗೆ ನಡೆಸಲಾಯಿತು. ಡಿಕೆಟಿಎಫ್ ಜಿಲ್ಲಾಧ್ಯಕ್ಷ ವಾಸುದೇ ವನ್ ನಾಯರ್ ಮಾತನಾಡಿ ಮುಖ್ಯಮಂತ್ರಿ ಜನದ್ರೋಹ ಆಡಳಿತವನ್ನು ಕೊನೆಗೊಳಿಸಬೇಕು ಇಲ್ಲದಿದ್ದಲ್ಲಿ ರಾಜೀನಾಮೆ ನೀಡಬೇಕು. ಸರಕಾರದ ದುರಾಡಳಿತವನ್ನು ಕೊನೆಗೊಳಿಸದಿದ್ದರೆ ಹೋರಾಟವನ್ನು ತೀವ್ರಗೊಳಿಸಲಾಗುವು ದೆಂದೂ ತಿಳಿಸಿದರು. ಕಾಂಗ್ರೆಸ್ ಮಂಡಲ ಅಧ್ಯಕ್ಷ ಶ್ಯಾಮ್ ಪ್ರಸಾದ್ ಮಾನ್ಯ, ಹಿರಿಯ ಕಾಂಗ್ರೆಸ್ ನೇತಾರ ಚಂದ್ರಹಾಸ ರೈ, ಕರ್ಷಕ ಕಾಂಗ್ರೆಸ್ ಮಂಡಲ ಅಧ್ಯಕ್ಷ ತಿರುಪತಿ ಕುಮಾರ್ ಭಟ್,  ಬ್ಲೋಕ್ ಕಾಂಗ್ರೆಸ್ ನೇತಾರರಾದ ಖಾದರ್ ಮಾನ್ಯ, ರಾಮ ಪಟ್ಟಾಜೆ, ಶಾಫಿ ಗೋಳಿಯಡ್ಕ, ಮಂಡಲ ಉಪಾಧ್ಯಕ್ಷ ಕೃಷ್ಣದಾಸ್, ಯೂತ್ ಕಾಂಗ್ರೆಸ್ ಜಿಲ್ಲಾ ಕಾರ್ಯದರ್ಶಿ ಶ್ರೀನಾಥ್, ಮಂಡಲ ಅಧ್ಯಕ್ಷ ಕೃಷ್ಣ ಕುಮಾರ್, ನೇತಾರರಾದ ಲೋಹಿತಾಕ್ಷನ್, ಅಬೂಬಕ್ಕರ್ ಬಣ್ಪುತ್ತಡ್ಕ,  ರವಿಕುಮಾರ್ ಕುಂಟಾಲುಮೂಲೆ, ಜೋನಿ ಕ್ರಾಸ್ತ ಕಾರ್ಮಾರು, ರಾಮ ಗೋಳಿಯಡ್ಕ, ಸತೀಶ್ ಪೆರುಮುಂಡ, ಖಮರುದ್ದೀನ್, ಜೋಸೆಫ್ ಕ್ರಾಸ್ತ, ನಿಜೀಶ್ ಎಂ, ಉದಯನ್, ಸವಾದ್, ಸದಾಶಿವ ಗೋಳಿಯಡ್ಕ, ಸತೀಶ ಮಾನ್ಯ ಮೊದಲಾದವರು ನೇತೃತ್ವ ನೀಡಿದರು.

ವರ್ಕಾಡಿ: ವರ್ಕಾಡಿ ಮಂಡಲ ಕಾಂಗ್ರೆಸ್ ವತಿಯಿಂದ ನಡೆದ ಪಂಜಿನ ಮೆರವಣಿಗೆಯನ್ನು ಮಂಜೇಶ್ವರ ಬ್ಲೋಕ್ ಕಾಂಗ್ರೆಸ್ ಅಧ್ಯಕ್ಷ ಮುಹಮ್ಮದ್ ಡಿಎಂಕೆ ಉದ್ಘಾಟಿಸಿದರು. ಅವರು ಮಾತನಾಡಿ, ಎಡರಂಗ ಸರಕಾರದ ಪಿಣರಾಯಿ ವಿಜಯನ್ ನೇತೃತ್ವದ ಅಧಿಕಾರಾವಧಿಯಲ್ಲಿ ಪ್ರಚಂಡ ಭ್ರಷ್ಟಾಚಾರವೆಸಗಿ ಕಾನೂನಿನ ಕುಣಿಕೆಯಿಂದ ತಪ್ಪಿಸಿಕೊಳ್ಳಲು ಕೇಂದ್ರದ ಬಿಜೆಪಿ ಸರಕಾರದ ಜೊತೆ ವ್ಯವಹಾರ ಕುದುರಿಸಿ ಪಾರಾಗಬಹುದು ಎಂದು ಮುಖ್ಯಮಂತ್ರಿ ತಿಳಿದುಕೊಂಡಿದ್ದರೆ ಅದು ಹಗಲು ಕನಸು ಮಾತ್ರವೆಂದು ಅವರು ನುಡಿದರು. ವಿವಿಧ ನೆಪಗಳನ್ನೊಡ್ಡಿ ಜನರಿಂದ ತೆರಿಗೆ ವಸೂಲಿ ನಡೆಸಲಾಗುತ್ತಿದ್ದು, ಆದರೆ ಬೆಲೆಯೇರಿಕೆ ತಡೆಗಟ್ಟಲು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ, ಕಳ್ಳತನ, ದರೋಡೆ, ಸುಲಿಗೆಗಳು ಹೆಚ್ಚಾಗುತ್ತಿದ್ದರೂ ಪೊಲೀಸರು ನಿಸ್ಸಹಾಯಕರಾಗಿ ಕೈಕಟ್ಟಿ ಕುಳಿತಿದ್ದಾರೆ ಎಂದು ಅವರು ದೂರಿದರು. ಈ ಸರಕಾರವನ್ನು ಅಧಿಕಾರದಿಂದ ಕಿತ್ತೊಗೆಯುವ ತನಕ ಹೋರಾಟದಿಂದ ಕಾಂಗ್ರೆಸ್ ಹಿಂದೆ ಸರಿಯದು ಎಂದು ಅವರು ನುಡಿದರು.

ಮುಖಂಡರಾದ ಪುರುಷೋತ್ತಮ ಅರಿಬೈಲ್, ಸದಾಶಿವ ಕೆ, ದಿವಾಕರ ಎಸ್.ಜೆ, ಮುಹಮ್ಮದ್ ಮಜಾಲ್, ಫ್ರಾನ್ಸಿಸ್ ಡಿಸೋಜ, ವಿನೋದ್ ಕುಮಾರ್, ವಸಂತರಾಜ್ ಶೆಟ್ಟಿ, ಗಂಗಾಧರ ಕೆ.ಎಸ್, ಹಮೀದ್ ಕಣಿಯೂರು, ಐತ್ತಪ್ಪ ನೀರೊಳಿಕೆ, ಬಾಸಿತ್ ತಲೆಕ್ಕಿ, ಅಬೂಬಕ್ಕರ್ ಪೊಯ್ಯೆ, ಅಬುಸಾಲಿ ಮೊರತ್ತಣೆ, ಮೂಸ, ರಝಾಕ್, ಮೂಸಾ ಅರಿಬೈಲ್, ಮುಸ್ತಫ, ನೌಶಾದ್, ಹಮೀದ್, ಸಲೀಂ ಉಪಸ್ಥಿತರಿದ್ದರು. ಅಲಿ ಧರ್ಮನಗರ ವಂದಿಸಿದರು.

ಮೀಯಪದವು: ಮೀಂಜ ಮಂಡಲ ಕಾಂಗ್ರೆಸ್ ವತಿಯಿಂದ ಮೀಯಪದವಿನಲ್ಲಿ ಜರಗಿದ ಪ್ರತಿಭಟನೆಯನ್ನು ಜಿಲ್ಲಾ ಪಂಚಾಯತ್ ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷ ಹರ್ಷಾದ್ ವರ್ಕಾಡಿ ಉದ್ಘಾಟಿಸಿದರು. ಮಂಡಲ ಕಾಂಗ್ರೆಸ್ ಅಧ್ಯಕ್ಷ ದಾಮೋದರ ಅಧ್ಯಕ್ಷತೆ ವಹಿಸಿದರು. ಮಂಜೇಶ್ವರ ಬ್ಲೋಕ್ ಪ್ರಧಾನ ಕಾರ್ಯದರ್ಶಿ ಜಗದೀಶ್ ಮೂಡಂಬೈಲು ಪ್ರಸ್ತಾಪಿಸಿದರು. ನೇತಾರರಾದ ಬಿ.ಕೆ. ಮೊಹಮ್ಮದ್, ಹನೀಫ್ ಎಚ್.ಎ, ಫ್ರಾನ್ಸಿಸ್ ಡಿಸೋಜ, ಜೆ. ಮೊಹಮ್ಮದ್ ಬೆಜ್ಜ, ಪಳ್ಳಿಕುಂಞಿ ತಲೇಕಳ, ಡೆನ್ಸಿಲ್ ಡಿಸೋಜ, ಅಬ್ದುಲ್ಲ ಕುಂಞಿ ಮೂಡಂಬೈಲು, ಹಮೀದ್ ಕಣಿಯೂರು, ಶಾಫಿ ತಲೇಕಳ, ಅಶ್ರಫ್ ಗಾಂಧೀನಗರ ಭಾಗವಹಿಸಿದರು.

Leave a Reply

Your email address will not be published. Required fields are marked *

You cannot copy content of this page