ಮುಖ್ಯಮಂತ್ರಿ-ರಾಜ್ಯಪಾಲರ ಮಧ್ಯೆ ಗುದ್ದಾಟ ತಾರಕಕ್ಕೆ
ಹೊಸದಿಲ್ಲಿ: ತಿರುವನಂತಪುರದಲ್ಲಿ ನಿನ್ನೆ ಸಂಜೆ ಎಸ್‌ಎಫ್‌ಐ ಕಾರ್ಯ ಕರ್ತರು ತನ್ನ ವಿರುದ್ಧ ನಡೆಸಿದ ಪ್ರತಿಭ ಟನೆ ಮುಖ್ಯಮಂತ್ರಿಯವರ ಅರಿವಿನೊಂ ದಿಗೆ ನಡೆದಿದೆ ಎಂದೂ ಅದರಲ್ಲಿ ಭಾರೀ ಒಳಸಂಚು ಕೂಡಾ ಹೂಡಲಾಗಿದೆ ಎಂದು ರಾಜ್ಯಪಾಲ ಆರೀಫ್ ಮೊಹ ಮ್ಮದ್ ಖಾನ್ ಗಂಭೀರ ಆರೋಪ ಹೊರಿಸಿದ್ದಾರೆ. ಹೊಸದಿಲ್ಲಿಯಲ್ಲಿ ಇಂದು ಬೆಳಿಗ್ಗೆ ಸುದ್ದಿಗಾರರೊಂದಿಗೆ ಅವರು ಮಾತನಾಡುತ್ತಿದ್ದರು. ಪ್ರತಿಭಟ ನೆಗಾರರು ತನ್ನ ಕಾರನ್ನು ಸುತ್ತುವರಿದು ತಡೆದ ವೇಳೆ ಪೊಲೀಸರು ಕೇವಲ ನೋಟಕ ವಸ್ತುವಿನಂತೆ ಅದನ್ನು ನೋ ಡುತ್ತಾ ನಿಂತಿದ್ದರು. ಪೊಲೀಸರ ಮೇಲೂ ತೀವ್ರ ಒತ್ತಡವಿತ್ತು ಎಂದು ರಾಜ್ಯಪಾ ಲರು ಆರೋಪಿಸಿದ್ದಾರೆ. ತನ್ನ ವಿರುದ್ಧ ನಡೆದ ಈ ದಾಳಿ ಪೂರ್ವಯೋಜಿತ ಕೃತ್ಯವಾಗಿತ್ತು. ಇದಕ್ಕೆ ಮುಖ್ಯಮಂತ್ರಿ ಉತ್ತರ ನೀಡಬೇಕು. ಕಣ್ಣೂರಿನಲ್ಲೂ ಈ ಹಿಂದೆ ಇಂತಹ ಯತ್ನ ನಡೆದಿತ್ತು. ಮುಖ್ಯಮಂತ್ರಿಯವರ ಬಸ್‌ನ ವಿರುದ್ಧ ಚಪ್ಪಲಿ ಎಸೆದವರ ವಿರುದ್ಧ ಪೊಲೀಸರು ನರಹತ್ಯಾ ಯತ್ನ ಪ್ರಕರಣ ದಾಖಲಿಸಿಕೊಂಡರೆ, ತನ್ನ ಕಾರು ತಡೆದವರ ವಿರುದ್ಧ ಪೊಲೀಸರ ಕರ್ತವ್ಯ ನಿರ್ವಹಣೆಗೆ ಅಡಚಣೆ ಸೃಷ್ಟಿಸಿದ ಆರೋಪದಂತೆ ಕೇವಲ ಕ್ಷುಲ್ಲಕ ಪ್ರಕರಣ ಮಾತ್ರವೇ ದಾಖಲಿಸಲಾಗಿದೆ. ಅದ್ಯಾವುದೇ ಪ್ರತ್ಯಾಘಾತಗಳನ್ನು ಎದುರಿಸಲು ನಾನು ಸಿದ್ಧ. ಎಲ್ಲಿಗೆ ಬೇಕಾದರೂ ಒಬ್ಬಂಟಿಗನಾಗಿ ಹೋಗಲು ತಾನು ಸಿದ್ಧನಿದ್ದೇನೆ. ದೂರದಲ್ಲಿ ನಿಂತು ಪತಾಕೆ ಬೀಸಲಿ ಎಂದು ರಾಜ್ಯಪಾಲರು ಸವಾಲೆಸೆದಿದ್ದಾರೆ.
ರಾಜ್ಯಪಾಲ ಆರೀಫ್ ಮೊಹಮ್ಮದ್ ಖಾನ್ ದಿಲ್ಲಿಗೆ ತೆರಳಲೆಂದು ಕಾರಿನಲ್ಲಿ ತಿರುವನಂತಪುರ ವಿಮಾನ ನಿಲ್ದಾಣಕ್ಕೆ ಹೋಗುವ ದಾರಿ ಮಧ್ಯೆ ವಿಮಾನ ನಿಲ್ದಾಣ ಸಮೀಪದ ಪಾಳಯಂ-ಪಾಕ್ಕಂ ರಸ್ತೆಯಲ್ಲಿ ನಿನ್ನೆ ಸಂಜೆ ೭ಕ್ಕೆ ಒಂದು ಗುಂಪು ಎಸ್‌ಎಫ್‌ಐ ಕಾರ್ಯಕರ್ತರು ಆ ಕಾರಿನ ವಿರುದ್ಧ ಕಪ್ಪು ಪತಾಕೆ ಪ್ರದರ್ಶಿಸಿ, ಕಾರಿನ ಗಾಜಿಗೆ ಬಡಿದು ಪ್ರತಿಭಟಿಸಿದ ಘಟನೆ ನಡೆದಿದೆ.
ಇದರಿಂದ ಸಿಟ್ಟಿಗೆದ್ದ ರಾಜ್ಯಪಾಲರು ದಿಢೀರ್ ಆಗಿ ತಮ್ಮ ಕಾರಿನಿಂದ ಅಲ್ಲೇ ಹೊರಗಿಳಿದು ಪ್ರತಿಭಟನಾಗಾರರ ವಿರುದ್ಧ ‘ಬ್ಲಡಿ ಪೋಲ್ಸ್, ಕ್ರಿಮಿನಲ್ಸ್’ ಎಂದು ಅತೀ ತೀಕ್ಷ್ಣವಾಗಿ ಅಲ್ಲೇ ಪ್ರತಿಕ್ರಿಯೆ ನೀಡಿದರು. ಪರಿಸ್ಥಿತಿ ಇನ್ನೇನು ವಿಕೋಪಕ್ಕೆ ತಿರುಗತೊಡಗಿದಂತೆಯೇ ಪ್ರತಿಭಟನೆ ವ್ಯಕ್ತಪಡಿಸಿದ ಕೆಲವು ಎಸ್‌ಎಫ್‌ಐ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡರು. ಆಗ ಅಲ್ಲಿದ್ದ ಇತರ ಕಾರ್ಯಕರ್ತರು ಅಲ್ಲಿಂದ ಜಾಗ ತೆರವುಗೊಳಿಸಿದರು. ಆಗ ನೀವು ನನಗೆ ಭಧ್ರತೆ ಒದಗಿಸುತ್ತಿರುವ ರೀತಿ ಇದಾಗಿದೆಯೇ ಎಂದು ರಾಜ್ಯಪಾಲರು ಪೊಲೀಸರನ್ನು ತರಾಟೆಗೆ ತೆಗೆದುಕೊಂಡರು.