ಮುಖ್ಯೋಪಾಧ್ಯಾಯಿನಿ ಸಂಧ್ಯಾ ನಿಧನ
ಕಾಸರಗೋಡು: ಬಂದಡ್ಕ ಮಾಣಿಮೂಲೆ ಜಿಎಲ್‌ಪಿ ಶಾಲೆಯ ಮುಖ್ಯೋಪಾಧ್ಯಾಯಿನಿ ಸಂಧ್ಯಾ (50) ನಿಧನ ಹೊಂದಿದರು. ಕುಂಡಂಕುಳಿ ನಿವಾಸಿಯಾಗಿದ್ದಾರೆ. ಕುಂಡಂಕುಳಿ ಶಾಲೆಯ ಕನ್ನಡ ಅಧ್ಯಾಪಿಕೆಯಾಗಿದ್ದರು. ಒಂದು ವರ್ಷದ ಹಿಂದೆ ಭಡ್ತಿ ಲಭಿಸಿ ಮಾಣಿಲ ಶಾಲೆಗೆ ವರ್ಗಾವಣೆಗೊಂಡಿ ದ್ದರು. ಅಸೌಖ್ಯ ತಗಲಿ ಚಿಕಿತ್ಸೆಯಲ್ಲಿದ್ದರು. ಕೆಎಸ್‌ಟಿಎ ಕಾರ್ಯಕರ್ತೆಯಾಗಿದ್ದರು. ಮೃತರು ಪತಿ ಸಿ. ಕೃಷ್ಣನ್, ಮಕ್ಕಳಾದ ಕೃಷ್ಣಪ್ರಸಾದ್, ಕೃಷ್ಣಪ್ರಿಯ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.