ಮುಳಿಂಜ ಶಾಲೆಗೆ ಶಿಕ್ಷಕಿಯರಿಂದ ಊಟದ ಬಟ್ಟಲು ಕೊಡುಗೆ
ಉಪ್ಪಳ: ಮುಳಿಂಜ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ವಿದ್ಯಾ ರ್ಥಿಗಳ ಮಧ್ಯಾಹ್ನದ ಭೋಜನಕ್ಕಾಗಿ ಸ್ಟೀಲ್ ಊಟದ ಬಟ್ಟಲುಗಳನ್ನು ಶಾಲೆಗೆ ನೂತನವಾಗಿ ಸೇರಿದ ಶಿಕ್ಷಕಿಯ ರಾದ ಐಶ್ವರ್ಯ, ಐಶಾತ್ ಸೈನಾಜ್ ಕೊಡುಗೆಯಾಗಿ ನೀಡಿದರು. ಮುಖ್ಯೋ ಪಾಧ್ಯಾಯಿನಿ ಚಿತ್ರಾವತಿ ಚಿಗುರುಪಾದೆ ಸ್ವೀಕರಿಸಿದರು. ಈ ವೇಳೆ ಜಿಲ್ಲಾ ಪಂಚಾ ಯತ್ ಸದಸ್ಯ ಗೋಲ್ಡನ್ ರಹ್ಮಾನ್, ಮಂಗಲ್ಪಾಡಿ ಪಂ. ಅಧ್ಯಕ್ಷೆ ರುಬೀನಾ ನೌಫಲ್, ಸ್ಥಾಯಿ ಸಮಿತಿ ಅಧ್ಯಕ್ಷೆ ಇರ್ಫಾನ ಇಕ್ಬಾಲ್, ಉಪ ಜಿಲ್ಲಾ ವಿದ್ಯಾ ಧಿಕಾರಿ ರಾಜಗೋಪಾಲ್, ಪಂ. ಸದಸ್ಯ ಅಬ್ದುಲ್ ಶರೀಫ್ ಮಜೀದ್, ಇಸ್ಮಾ ಯಿಲ್, ಫಾರೂಕ್ ಉಪಸ್ಥಿತರಿದ್ದರು.