ಮುಳಿಯಾರಿನಲ್ಲಿ ಚಿರತೆ ಪ್ರತ್ಯಕ್ಷ ವದಂತಿ: ಶೋಧ ಆರಂಭ

ಬೋವಿಕ್ಕಾನ: ಮುಳಿಯಾರು ಪಂಚಾಯತ್ ವ್ಯಾಪ್ತಿಯಲ್ಲಿ ಚಿರತೆ ಪ್ರತ್ಯಕ್ಷಗೊಂಡ ಬಗ್ಗೆ ವದಂತಿ ಹರಡಿದೆ. ಬಾವಿಕೆರೆ ಎಂಟನೇ ಮೈಲು ರಸ್ತೆಯಲ್ಲಿ ಚಿರತೆ ಕಂಡು ಬಂದಿದೆ ಎಂದು ಹೇಳಲಾಗುತ್ತಿದೆ.

ಇದೇ ವೇಳೆ ಪಾಣೂರು ತೈರೆ ಎಂಬಲ್ಲಿ ಆಟೋ ಚಾಲಕರೊಬ್ಬ ರಿಗೆ ಚಿರತೆ ಕಂಡುಬಂದಿರುವುದಾಗಿ ತಿಳಿಸಲಾಗಿದೆ. ರಾತ್ರಿ ವೇಳೆ ಆಟೋ ರಿಕ್ಷಾ ಬಾಡಿಗೆಗೆ  ತೆರಳಿ ಮರಳುತ್ತಿ ದ್ದಾಗ ರಸ್ತೆಗೆ ಅಡ್ಡವಾಗಿ ಚಿರತೆ ಓಡಿದೆ ಎಂದು ಹೇಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಚಿರತೆ ಕಂಡುಬಂದಿದೆ ಯೆನ್ನಲಾದ ಸ್ಥಳಗಳಿಗೆ ಅರಣ್ಯಾಧಿಕಾರಿ ಗಳು ತಲುಪಿ ಶೋಧ ಆರಂ ಭಿಸಿದ್ದಾರೆ. ಇತ್ತೀಚೆಗಷ್ಟೇ ಸಾಕುನಾಯಿಯೊಂ ದನ್ನು  ಅಜ್ಞಾತ ಜೀವಿ ಕಡಿದಿರುವು ದಾಗಿ ಹೇಳಲಾಗುತ್ತಿದ್ದು, ಇದರಿಂದ ಆತಂಕ ಸೃಷ್ಟಿಯಾದ ಬೆನ್ನಲ್ಲೇ ಚಿರತೆ ಪ್ರತ್ಯಕ್ಷಗೊಂಡ ಬಗ್ಗೆ ವರದಿಯಾಗಿದೆ.

RELATED NEWS

You cannot copy contents of this page