ಮುಳ್ಳೇರಿಯ ಟ್ರೇಡ್ ಫೆಸ್ಟ್ ಉದ್ಘಾಟನೆ ನಾಳೆ
ಮುಳ್ಳೇರಿಯ: ಮುಳ್ಳೇರಿಯ ಬಿಸ್ ನೆಸ್ ಅಸೋಸಿಯೇಶನ್ ನೇತೃತ್ವದಲ್ಲಿ ಸಿದ್ಧಗೊಳ್ಳುವ ಮುಳ್ಳೇರಿಯ ಟ್ರೇಡ್ ಫೆಸ್ಟ್ ನಾಳೆ ಆರಂಭಗೊಳ್ಳುವುದು. ಮುಳ್ಳೇರಿಯ ಪೇಟೆಯಲ್ಲಿ ಪ್ರತ್ಯೇಕ ಸಿದ್ಧಪಡಿಸಿದ ವಿಶಾಲವಾದ ಸ್ಥಳದಲ್ಲಿ ಫೆಸ್ಟ್ ನಡೆಸಲಾಗುವುದು. ನಾಳೆ ಸಂಜೆ ೬ ಗಂಟೆಗೆ ಶಾಸಕ ಎನ್.ಎ. ನೆಲ್ಲಿಕುನ್ನು ಉದ್ಘಾಟಿಸುವರು. ಶಾಸಕರಾದ ಸಿ.ಎಚ್. ಕುಂಞಂಬು, ಅಶೋಕ್ ಕುಮಾರ್ ಪುತ್ತೂರು, ಭಾಗೀರಥಿ ಸುಳ್ಯ, ಬ್ಲೋಕ್ ಪಂ. ಅಧ್ಯಕ್ಷ ಸಿಜಿ ಮ್ಯಾಥ್ಯು, ಬಿಜೆಪಿ ಜಿಲ್ಲಾ ಅಧ್ಯಕ್ಷ ರವೀಶ ತಂತ್ರಿ ಕುಂಟಾರು, ಪಂ. ಸದಸ್ಯ ಸಿ.ಎನ್. ಸಂತೋಷ್ ಮುಖ್ಯ ಅತಿಥಿ ಗಳಾಗಿರುವರು. ಪಂಚಾಯತ್ ಅಧ್ಯಕ್ಷ ಕೆ. ಗೋಪಾಲಕೃಷ್ಣ ಅಧ್ಯಕ್ಷತೆ ವಹಿಸುವರು. ವಿವಿಧ ರಾಜಕೀಯ ಪಕ್ಷಗಳ ಮುಖಂಡ ರಾದ ಕೆ. ವಸಂತ, ಪುರುಷೋತ್ತಮ, ಮುಹಮ್ಮದ್ ಕುಂಞಿ, ನವೀನ್, ಸುಕುಮಾರನ್ ಎಂಬಿವರು ಮಾತ ನಾಡುವರು. ಆರ್ಗನೈಸಿಂಗ್ ಸಮಿತಿ ಅಧ್ಯಕ್ಷ ಆಗ್ನೇಶ್ ಕೆ. ಪ್ರಸ್ತಾಪಿಸು ವರು. ಕ್ಯಾಂಪ್ಕೋ ನಿರ್ದೇಶಕ ಎಸ್.ಎನ್. ಪ್ರಸಾದ್, ಹರೀಶ್ ಬೇಂಗತ್ತಡ್ಕ ಉಪಸ್ಥಿತರಿರುವರು. ಬಳಿಕ ಮಲಬಾರಿನ ಮೊದಲ ಮಹಿಳಾ ವಾಟರ್ ಡಿಜೆ ನಡೆಯಲಿದೆ.
ಎರಡನೇ ದಿನದ ಕಾರ್ಯಕ್ರ ಮದಲ್ಲಿ ಸಂಸದ ರಾಜ್‌ಮೋಹನ್ ಉಣ್ಣಿತ್ತಾನ್ ಮುಖ್ಯ ಅತಿಥಿಯಾಗಿ ಭಾಗವಹಿಸುವರು. ಫೆಸ್ಟ್‌ನಲ್ಲಿ ಅಮ್ಯೂಸ್‌ಮೆಂಟ್ ಪಾರ್ಕ್‌ಗಳು, ಕೃಷಿ, ಯಂತ್ರ ಮೇಳ, ವಿವಿಧ ಆಹಾರ ವೈವಿದ್ಯಗಳ ಸ್ಟಾಲ್‌ಗಳು, ಶಾಪಿಂಗ್ ಸ್ಟಾಲ್‌ಗಳನ್ನು ಸಿದ್ಧಪಡಿ ಸಲಾಗುವುದು. ಸಂಜೆ 4ರಿಂದ ರಾತ್ರಿ 10 ಗಂಟೆವರೆಗೆ ಫೆಸ್ಟ್ ತೆರೆದಿರುತ್ತದೆ. ರಾಜ್ಯಮಟ್ಟದ ಕಲಾವಿದರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಡುವರು. 27ರಂದು ಫೆಸ್ಟ್ ಸಮಾಪ್ತಿಗೊಳ್ಳಲಿದೆ.