ಮುಳ್ಳೇರಿಯ: ಮದ್ಯವರ್ಜನ ಶಿಬಿರದಲ್ಲಿ ಕುಟುಂಬ ದಿನ
ಮುಳ್ಳೇರಿಯ: ಇಲ್ಲಿನ ಗಣೇಶ ಕಲಾ ಮಂದಿರದಲ್ಲಿ ನಡೆದ 1878ನೇ ಮದ್ಯವರ್ಜನ ಶಿಬಿರದಲ್ಲಿ ಕುಟುಂಬ ದಿನ ನಡೆಯಿತು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾ ಭಿವೃದ್ಧಿ ಯೋಜನೆಯ ಜನಜಾಗೃತಿ ವಿಭಾಗದ ಪ್ರಾದೇಶಿಕ ನಿರ್ದೇಶಕ ವಿವೇಕ್ ವಿನ್ಸೆಂಟ್ ಪಾಯಸ್ ಕೌಟುಂಬಿಕ ಸಾಮರಸ್ಯ, ಕುಟುಂಬ ಬಾಂಧವ್ಯ ಬಗ್ಗೆ ಮಾತನಾಡಿದರು. ಶಿಬಿರದಲ್ಲಿ ೯೩ ಜನ ಶಿಬಿರಾರ್ಥಿಗಳು ಮದ್ಯಪಾನ ಉಪೇಕ್ಷಿಸುವ ಸಂಕಲ್ಪ ಕೈಗೊಂಡರು. ಕಾರ್ಯಕ್ರಮದಲ್ಲಿ ಅಖಿಲೇಶ್ ನಗುಮುಗಂ, ಶಿವಕೃಷ್ಣ ಭಟ್, ರತನ್ ಕುಮಾರ್ ನಾಯ್ಕ್, ಜಯಪ್ರಕಾಶ್ ತೊಟ್ಟೆತ್ತೋಡಿ, ಅಶ್ವತ್ಥ್ ಪೂಜಾರಿ ಲಾಲ್‌ಬಾಗ್, ನವ ಜೀವನ ಸಮಿತಿ ಸದಸ್ಯರು, ಜನಜಾಗೃತಿ ವೇದಿಕೆಯ ಸದಸ್ಯರು, ಶೌರ್ಯ ಘಟಕ ಸದಸ್ಯರು ಭಾಗವಹಿಸಿದರು.