ಮುಸ್ಲಿಂ ಲೀಗ್‌ಗಿಲ್ಲ್ಲ ಮೂರನೇ ಸೀಟು
ಕೊಚ್ಚಿ: ಲೋಕಸಭಾ ಚುನಾವಣೆ ಯಲ್ಲಿ ತಮಗೆ ಮೂರು ಸೀಟು ಲಭಿಸಬೇಕೆಂಬ ಮುಸ್ಲಿಂ ಲೀಗ್‌ನ ಬೇಡಿಕೆಯನ್ನು ಕಾಂಗ್ರೆಸ್ ನಿರಾಕರಿಸಿದೆ. ತೃತೀಯ ಸೀಟು ನೀಡಿದ್ದಲ್ಲಿ, ಅದರಿಂದ ಉಂಟಾಗಬಹುದಾದ ಸಂಕಷ್ಟಗಳನ್ನು ಕಾಂಗ್ರೆಸ್ ಮುಸ್ಲಿಂ ಲೀಗ್‌ಗೆ ಮನವರಿಕೆ ಮಾಡಿದೆ. ಆದ್ದರಿಂದ ಲೋಕಸಭೆಯಲ್ಲಿ ಮೂರು ಸೀಟುಗಳ ಬದಲು ರಾಜ್ಯಸಭೆಗೆ ಹೆಚ್ಚುವರಿಯಾಗಿ ಇನ್ನೊಂದು ಸೀಟು ನೀಡಲು ಸಿದ್ಧ ಎಂದು ಕಾಂಗ್ರೆಸ್ ಮುಸ್ಲಿಂ ಲೀಗ್‌ಗೆ ತಿಳಿಸಿದೆ.
ಕೊಚ್ಚಿಯಲ್ಲಿ ನಡೆದ ಕಾಂಗ್ರೆಸ್ ಮತ್ತು ಮುಸ್ಲಿಂ ಲೀಗ್ ನೇತಾರರ ಚರ್ಚೆ ಸಭೆಯಲ್ಲಿ ಈ ತೀರ್ಮಾನಕ್ಕೆ ಬರಲಾಗಿದೆ. ಕಾಂಗ್ರೆಸ್ ರಾಜ್ಯ ಅಧ್ಯಕ್ಷ ಕೆ. ಸುಧಾಕರನ್, ವಿರೋಧ ಪಕ್ಷ ನಾಯಕ ವಿ.ಡಿ. ಸತೀಶನ್, ರಮೇಶ್ ಚೆನ್ನಿತ್ತಲ, ಎಂ.ಎಂ ಹಸ್ಸನ್, ಮುಸ್ಲಿಂ ಲೀಗ್ ನೇತಾರರಾದ ಪಿ.ಕೆ. ಕುಂಞಾಲಿಕುಟ್ಟಿ, ಇ.ಟಿ. ಮೊಹಮ್ಮದ್ ಬಶೀರ್, ಪಿ.ಎಂ.ಎ. ಸಲಾಂ, ಎಂ.ಕೆ. ಮುನೀರ್ ಮತ್ತು ಕೆ.ಪಿ.ಎ. ಮಜೀದ್ ಮೊದಲಾದವರು ಚರ್ಚೆ ಸಭೆಯಲ್ಲಿ ಭಾಗವಹಿಸಿದರು.
ಸಭೆಯಲ್ಲಿ ಕೈಗೊಳ್ಳಲಾದ ತೀರ್ಮಾ ನದ ಬಗ್ಗೆ ಫೆಬ್ರವರಿ ೨೭ರಂದು ನಡೆಯಲಿರುವ ಮುಸ್ಲಿಂ ಲೀಗ್ ನೇತೃತ್ವಕ್ಕೆ ಸಭೆಯಲ್ಲಿ ಚರ್ಚಿಸಿದ ಬಳಿಕ ಈ ವಿಷಯದಲ್ಲಿ ನಮ್ಮ ಪಕ್ಷದ ಅಂತಿಮ ತೀರ್ಮಾನ ತಿಳಿಸಲಾಗುವುದೆಂದು ಮುಸ್ಲಿಂ ಲೀಗ್ ನೇತಾರರು ಸಭೆ ಬಳಿಕ ಸುದ್ಧಿ ಗಾರರಲ್ಲಿ ತಿಳಿಸಿದ್ದಾರೆ. ತೃತೀಯ ಸೀಟಿನ ವಿಷಯದಲ್ಲಿ ಕಾಂಗ್ರೆಸ್ ತಳೆದಿರುವ ನಿಲುವಿಗೆ ಮುಸ್ಲಿಂ ಲೀಗ್ ಕಾರ್ಯಕರ್ತ ರಲ್ಲಿ ಪ್ರತಿಕೂಲ ಮತ್ತು ಅನನುಕೂಲಕರ ನಿಲುವುಗಳು ವ್ಯಕ್ತವಾಗತೊಡಗಿದೆ.
ಇದರಿಂದಾಗಿ ಮುಸ್ಲಿಂ ಲೀಗ್ ತನ್ನ ಈಗಿರುವ ಮಲಪ್ಪುರಂ ಮತ್ತು ಪೊನ್ನಾನಿ ಲೋಕಸಭಾ ಕ್ಷೇತ್ರಗಳಲ್ಲಿ ಮಾತ್ರವೇ ತೃಪ್ತಿಪಡಬೇಕಾಗಿ ಬಂದಿದೆ.