ಮುಸ್ಲಿಂ ಲೀಗ್ ಜಿಲ್ಲಾ ಕಚೇರಿ ಕಟ್ಟಡ ಶಿಲಾನ್ಯಾಸ ೮ರಂದು
ಕಾಸರಗೋಡು: ಮುಸ್ಲಿಂಲೀಗ್ ಜಿಲ್ಲಾ ಸಮಿತಿ ಕಾಸರಗೋಡು ಹೊಸ ಬಸ್ ನಿಲ್ದಾಣ ಪರಿಸರದಲ್ಲಿ ನಿರ್ಮಿಸುವ ಕಚೇರಿ ಕಟ್ಟಡಕ್ಕೆ ಈ ತಿಂಗಳ ೮ರಂದು ಸಂಜೆ ೪ ಗಂಟೆಗೆ ಮುಸ್ಲಿಂ ಲೀಗ್ ರಾಜ್ಯ ಅಧ್ಯಕ್ಷ ಪಾಣಕ್ಕಾಡ್ ಸಯ್ಯಿದ್ ಸಾದಿಖಲಿ ಶಿಹಾಬ್ ತಂಙಳ್ ಶಿಲಾನ್ಯಾಸ ನೆರವೇರಿಸುವರು.
ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪಿ.ಕೆ. ಕುಂಞಾಲಿಕುಟ್ಟಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ಎಂ.ಎ. ಸಲಾಂ, ಸಿಟಿ ಅಹಮ್ಮದಲಿ ಸಹಿತ ಹಲವರು ಭಾಗವಹಿಸುವರು.