ಮುಸ್ಲಿಂ ಲೀಗ್ ನೇತಾರ ಎಂ.ಬಿ. ಯೂಸಫ್ ಹಾಜಿ ನಿಧನ

ಕುಂಬಳೆ: ಮುಸ್ಲಿಂ ಲೀಗ್ ಜಿಲ್ಲಾ ಉಪಾಧ್ಯಕ್ಷರೂ, ಗುತ್ತಿಗೆದಾರನಾದ ಬಂದ್ಯೋಡಿನ ಎಂ.ಬಿ. ಯೂಸಫ್ ಹಾಜಿ (62) ನಿಧನಹೊಂದಿದರು. ಶ್ವಾಸಕೋಶ ಸಂಬಂಧ ಅಸೌಖ್ಯ ದಿಂದ ಚಿಕಿತ್ಸೆಯಲ್ಲಿದ್ದರು.  ಇವರು ನಿನ್ನೆ ಮಧ್ಯಾಹ್ನ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನಹೊಂದಿದ್ದಾರೆ. ಮಂಜೇಶ್ವರ ಮಂಡಲದಲ್ಲಿ ಮುಸ್ಲಿಂ ಲೀಗ್‌ನ ಬೆಳವಣಿಗೆಯಲ್ಲಿ ಪ್ರಧಾನ ಪಾತ್ರ ವಹಿಸಿದ್ದರು. ಹಲವು ವ್ಯಾಪಾರ ಸಂಸ್ಥೆಗಳ ಮಾಲಕನೂ ಆಗಿದ್ದರು.

ಮೃತರು ಪತ್ನಿ ಖದೀಜ, ಮಕ್ಕಳಾದ ಫಾರೂಕ್, ಫಸೀದ, ಫಾರಿಸ, ಫೈಸಲ್, ಫರ್ಹಾನ್, ಅಳಿಯ-ಸೊಸೆಯಂದಿ ರಾದ ಅಜ್ಮಲ್, ಇಸ್ಮಾಯಿಲ್, ಆಯಿಶ, ಶಿಬಿಲ, ಸಹೋದರ ಸಫಾಮೂಸ, ಸಹೋದರಿಯರಾದ ಫಾತೀಮ, ಮರಿಯಮ್ಮ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ನಿಧನಕ್ಕೆ ಮುಸ್ಲಿಂ ಲೀಗ್ ಮಂಜೇಶ್ವರ ಮಂಡಲ ಸಮಿತಿ, ಕುಂಬಳೆ ಹಾಗೂ ಮಂಗಲ್ಪಾಡಿ ಪಂಚಾಯತ್ ಸಮಿತಿಗಳು ಸಂತಾಪ  ಸೂಚಿಸಿವೆ.

RELATED NEWS

You cannot copy contents of this page