ಮುಸ್ಲಿಂ ಲೀಗ್ ವರ್ಕಾಡಿ ಪಂಚಾಯತ್ ಏಕದಿನ ಅಧ್ಯಯನ ಶಿಬಿರ 12ರಂದು
ವರ್ಕಾಡಿ: ಇಂಡ್ಯನ್ ಯೂನಿಯನ್ ಮುಸ್ಲಿಂ ಲೀಗ್ ವರ್ಕಾಡಿ ಪಂಚಾಯತ್ ಸಮಿತಿಯ ಏಕದಿನ ಅಧ್ಯಯನ ಶಿಬಿರ ಈ ತಿಂಗಳ 12ರಂದು ಬೆಳಿಗ್ಗೆ 9 ಗಂಟೆಯಿಂದ ಗಾಂಧಿನಗರದಲ್ಲಿ ನಡೆಯಲಿದೆ. ಪಂಚಾಯತ್, ವಾರ್ಡ್ ಮಟ್ಟದ ಪದಾಧಿಕಾರಿಗಳು, ಪೋಷಕ ಸಂಘಟನೆಗಳ ಪದಾಧಿಕಾರಿಗಳು, ಮಂಡಲ ಜಿಲ್ಲಾ ನೇತಾರರು ಭಾಗವಹಿಸುವರು. ಇದರ ಯಶಸ್ವಿಗೆ ನಡೆಸಿದ ಸಭೆಯಲ್ಲಿ ಎ. ಮುಹಮ್ಮದ್ ಪಾವೂರು ಅಧ್ಯಕ್ಷತೆ ವಹಿಸಿದರು. ಖಾಲಿದ್ ದುರ್ಗಿಪಳ್ಳ, ಮೂಸಕುಂಞ ಹಾಜಿ ತೋಕೆ, ಉಮರಬ್ಬ ಆನೆಕಲ್ಲು, ಬಾವ ಹಾಜಿ ಸೂಫಿನಗರ, ಮೂಸ ಕೆದುಂಬಾಡಿ, ಅಹಮ್ಮದ್ ಕುಂಞಿ ಕಜೆ, ಸಿದ್ದಿಕ್ ಧರ್ಮನಗರ, ಇಬ್ರಾಹಿಂ ಕಜೆ, ಮುಹಮ್ಮದ್ ಧರ್ಮನಗರ, ಇಬ್ರಾಹಿಂ ಧರ್ಮನಗರ ಭಾಗವಹಿಸುವರು. ಅಬ್ದುಲ್ ಮಜೀದ್ ಸ್ವಾಗತಿಸುವರು.