ಮುಸ್ಲಿಂ ಲೀಗ್ ಸಕ್ರಿಯ ಕಾರ್ಯಕರ್ತ ನಿಧನ
ಕುಂಬಳೆ: ಮುಸ್ಲಿಂ ಲೀ ಗ್ನ ಸಕ್ರಿಯ ಕಾರ್ಯಕರ್ತ, ಮಂಜೇಶ್ವರ ಮಂಡಲ ಮಾ ಜಿ ಆಫೀಸ್ ಸೆಕ್ರೆಟರಿಯಾಗಿದ್ದ ಮೊಗ್ರಾಲ್ ಸರಕಾರಿ ವಿ.ಎಚ್.ಎಸ್.ಎಸ್. ಸಮೀಪದ ಟಿ.ಎಂ. ಹಂಸ (62) ನಿಧನ ಹೊಂದಿ ದರು. ಅಸೌಖ್ಯ ಕಾಣಿಸಿಕೊಂಡ ಇವ ರನ್ನು ಶನಿವಾರ ಸಂಜೆ ಕಾಸರಗೋಡಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾ ಗಿತ್ತು. ನಿನ್ನೆ ಮಧ್ಯಾಹ್ನ ವೇಳೆ ನಿಧನ ಸಂಭವಿಸಿದೆ. ದಿವಂಗತರಾದ ಟಿ. ಮಮ್ಮುಂಞಿ ಮಾಸ್ತರ್- ಆಸ್ಯುಮ್ಮ ದಂಪತಿಯ ಪುತ್ರನಾದ ಮೃತರು ಪತ್ನಿ ಸುಹರ, ಮಕ್ಕಳಾದ ಶಿಹಾಬ್, ಶಾನಿಫ್, ಶಾಬಿಕ್ಕ, ಶಂನಾಸ್, ಶಹಮ, ಶಹಬಾಸ್, ಸಹೋದರ- ಸಹೋದರಿಯರಾದ ಅಬ್ದುಲ್ ಸಲಾಂ, ಅಬ್ದುಲ್ ಖಾದರ್, ಫಸೀಲತ್ ಬೀವಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಇತರ ಸಹೋದರರಾದ ಅಬ್ದುಲ್ಲ, ಫಕ್ರುದ್ದೀನ್, ಅಬ್ದುಲ್ ರಹ್ಮಾನ್ ಈ ಹಿಂದೆ ನಿಧನರಾಗಿದ್ದಾರೆ.