ಮುಹಿಮ್ಮಾತ್ನಲ್ಲಿ ಹಜ್ ತರಗತಿ ಶಿಬಿರ ನಾಳೆ
ಪುತ್ತಿಗೆ: ಸರಕಾರಿ ಮೂಲಕ ಹಾಗೂ ಖಾಸಗಿ ವಲಯದಲ್ಲಿ ಈ ವರ್ಷ ಹಜ್ಗೆ ತೆರಳುವವರಿಗೆ ಪುತ್ತಿಗೆ ಮುಹಿಮ್ಮಾತುಲ್ ಮುಸ್ಲಿ ಮೀನ್ ಎಜ್ಯುಕೇಶನ್ ಸೆಂಟರ್ನ ಅಧೀನದಲ್ಲಿ ದ್ವಿತೀಯ ಹಂತದ ಹಜ್ ತಾಂತ್ರಿಕ ಅಧ್ಯಯನ ತರಗತಿ ನಾಳೆ ಬೆಳಿಗ್ಗೆ ೯ರಿಂದ ಮುಹಿಮ್ಮಾತ್ ಇಸ್ಸುದ್ದೀನ್ ಸಖಾಫಿ ಸಭಾಂಗಣದಲ್ಲಿ ನಡೆಯಲಿದೆ. ಅಬ್ದುಲ್ ಕರೀಂ ಸಖಾಫಿ ಇಡುಕ್ಕಿ ತರಗತಿ ನಡೆಸುವರು. ಬಿ.ಎಸ್. ಅಬ್ದುಲ್ಲಕುಂಞಿ ಫೈಸಿ ಅಧ್ಯಕ್ಷತೆ ವಹಿಸಲಿದ್ದು, ಹಸನುಲ್ ಅಹ್ದಲ್ ತಂಙಳ್ ಉದ್ಘಾಟಿ ಸುವರು. ಹಲವ ರು ಭಾಗವಹಿಸುವರು. ತರಗತಿಯಲ್ಲಿ ಭಾಗವಹಿಸಲು ಆಸಕ್ತಿಯಿರುವವರು ಮುಂಚಿತವಾಗಿ ಹೆಸರು ನೋಂದಾಯಿಸಲು ತಿಳಿಸಿದ್ದಾರೆ.