ಮೆದುಳಿನಲ್ಲಿ ರಕ್ತಸ್ರಾವ ಸಿಪಿಎಂ ಪ್ರಾದೇಶಿಕ ನೇತಾರ ಮೃತ್ಯು
ಕಾಸರಗೋಡು: ಮೆದುಳಿನಲ್ಲಿ ಅಪರಿಮಿತ ರಕ್ತಸ್ರಾವವಾದ ಹಿನ್ನೆಲೆಯಲ್ಲಿ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದ ಸಿಪಿಎಂ ಪ್ರಾದೇಶಿಕ ನೇತಾರ ಮೃತಪಟ್ಟರು. ಸಿಪಿಎಂ ಮಾಜಿ ಕೊಯಂಕರ ಈಸ್ಟ್ ಬ್ರಾಂಚ್ ಸೆಕ್ರೆಟರಿಯಾದ ಹೊಲಿಗೆ ಕಾರ್ಮಿಕ ಎಂ. ಮೋಹನನ್ (52) ಮೃತಪಟ್ಟ ವ್ಯಕ್ತಿ. ಬೆಂಗಳೂರಿನ ರಾಮಯ್ಯ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆಯಲ್ಲಿದ್ದ ಮೋಹ ನನ್‌ರ ಚಿಕಿತ್ಸೆಗಾಗಿ ನಾಗರಿಕರು ಸಹಾಯ ಸಮಿತಿ ರೂಪೀಕರಿಸಿ ಹಣ ಸಂಗ್ರಹಕ್ಕೆ ಚಾಲನೆ ನೀಡಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ಮಧ್ಯಾಹ್ನ ಮೋಹನನ್ ಮೃತಪಟ್ಟಿದ್ದಾರೆ.
ದಿ| ಮುಂಡಯಿಲ್ ಕುಂಞಂಬು-ಮಣಕ್ಕಾಟ್ ಮಾಣಿಕ್ಕತ್ ಎಂಬವರ ಪುತ್ರನಾದ ಮೃತರು ಪತ್ನಿ ಅಂಬಿಳಿ, ಮಕ್ಕಳಾದ ಆಕಾಶ್, ಹರಿತ, ಅಳಿಯ ಕಿಸನ್, ಸಹೋದರ-ಸಹೋದರಿ ಯರಾದ ರಮಣಿ, ವಲ್ಸರಾಜನ್, ತಂಬಾಯಿ, ಕಾರ್ತ್ಯಾಯಿನಿ, ರವಿ, ಅನಿತ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.