ಮೊಗೇರ ದೈವ ಆರಾಧಕರ ಸಮಾಲೋಚನಾ ಸಭೆ ನಾಳೆ
ಕಾಸರಗೋಡು: ಕೊಡಗು ಜಿಲ್ಲಾ ಮೊಗೇರ ಸೇವಾ ಸಮಾಜ ಮತ್ತು ಆದಿ ನಾಗಬ್ರಹ್ಮ ಮೊಗೇರ್ಕಳ ಸಾಂಸ್ಕೃತಿಕ ಅಧ್ಯಯನ ಟ್ರಸ್ಟ್ ಆಶ್ರಯದಲ್ಲಿ ಮೊಗೇರ ದೈವ ಆರಾಧಕರ ಸಮಾಲೋ ಚನಾ ಸಭೆ ನಾಳೆ ಬೆಳಿಗ್ಗೆ 10 ಗಂಟೆಗೆ ಮಡಿಕೇರಿ ಕೋಟೆ ಮಹಿಳಾ ಸಮಾಜ ದಲ್ಲಿ ನಡೆಯಲಿದೆ. ಮುದ್ದ ಕಳಲರು ಐಕ್ಯವಾದ ಸ್ಥಳದ ಕುರಿತು, ಮೊಗೇರ್ಕಳ ದೈವದ ಮಂಜದ ಸೇವೆ, ನೇಮದ ಕಟ್ಟಳೆ, ಸಂದಿ ಪಾಡ್ದನ ಸಹಿತ ವಿವಿಧ ವಿಷಯಗಳ ಕುರಿತು ವಿಚಾರಗೋಷ್ಠಿ ನಡೆಯಲಿದೆ ಎಂದು ಕೊಡಗು ಜಿಲ್ಲಾ ಮೊಗೇರ ಸಮಾಜ ಸಮಿತಿ ತಿಳಿಸಿದೆ.