ಮೊಗ್ರಾಲ್ನಲ್ಲಿ ಬಿರುಸಿನ ಮತದಾನ
ಮೊಗ್ರಾಲ್: ಮೊಗ್ರಾಲ್ನಲ್ಲಿ ಬೆಳಿಗ್ಗೆಯೇ ಬಿರುಸಿನ ಮತದಾನ ಕಂಡು ಬಂದಿದೆ. ನಾಲ್ಕು ಬೂತ್ಗಳಲ್ಲಿ ಭಾರೀ ಸರದಿ ಸಾಲು ಕಂಡು ಬಂದಿದೆ. ಮಧ್ಯಾಹ್ನ ವೇಳೆ ಬಿಸಿ ಹೆಚ್ಚುವುದರಿಂದಾಗಿ ಸ್ಥಳೀಯರೆಲ್ಲಾ ಬೆಳಿಗ್ಗೆಯೇ ಮತಗಟ್ಟೆಗೆ ತಲುಪಿ ಸರದಿ ಸಾಲಲ್ಲಿ ನಿಂತಿದ್ದಾರೆ. 12 ಗಂಟೆ ವೇಳೆಗೆ 40 ಶೇಕಡಾ ಮತದಾನ ಪೂರ್ತಿಗೊಳಿಸುವ ಯತ್ನದಲ್ಲಿ ವಿವಿಧ ರಾಜಕೀಯ ಪಕ್ಷಗಳು ನಿರತವಾಗಿವೆ.ಮೊಗ್ರಾಲ್ನ 136ನೇ ನಂಬ್ರ ಬೂತ್ನಲ್ಲಿ ಸಮಸ್ತ ಕೇರಳ ಜಂಯಿಯತ್ತುಲ್ ಉಲಮ ಉಪಾಧ್ಯಕ್ಷ ಯು.ಎಂ. ಅಬ್ದುಲ್ ರಹ್ಮಾನ್ ಮೌಲವಿ ಮೊದಲ ಮತ ಚಲಾಯಿಸಿದರು.