ಮೊಗ್ರಾಲ್ ಪುತ್ತೂರುನಲ್ಲಿ ಯುಡಿಎಫ್- ಸಿಪಿಎಂ ಒಳ ಒಪ್ಪಂದ- ಬಿಜೆಪಿ ಆರೋಪ
ಮೊಗ್ರಾಲ್ ಪುತ್ತೂರು: ಪಂಚಾಯತ್‌ನ 3, 14ನೇ ವಾರ್ಡ್‌ಗಳಿಗೆ ನಡೆದ ಉಪ ಚುನಾವಣೆಯಲ್ಲಿ ಯುಡಿಎಫ್‌ಗೆ ಸಿಪಿಎಂ ಮತ ನೀಡಿದ್ದು, ಈ ಪಕ್ಷಗಳ ಮಧ್ಯೆ ಒಳ ಒಪ್ಪಂದ ಖಚಿತಗೊಂಡಿದೆ ಎಂದು ಬಿಜೆಪಿ ದೂರಿದೆ. ವಾರ್ಡ್ 3ರಲ್ಲಿ ಸ್ಪರ್ಧಿಸಿದ ಯುಡಿಎಫ್ ಅಭ್ಯರ್ಥಿ ಅಸ್ಮಿನ್ ಶಾಫಿಯವರಿಗೆ 563 ಮತ ಲಭಿಸಿದ್ದು, ಸ್ವತಂತ್ರ ಅಭ್ಯರ್ಥಿ ಸಂಗೀತಾರಿಗೆ 396 ಮತ ಲಭಿಸಿದೆ. 167 ಮತಗಳ ಅಂತರದಲ್ಲಿ ಜಯ ಉಂಟಾಗಿದೆ. ಇದೇ ವೇಳೆ ಕಳೆದ 2020ರ ತ್ರಿಸ್ತರ ಚುನಾವಣೆಯಲ್ಲಿ ಈ ವಾರ್ಡ್‌ನಲ್ಲಿ 219 ಮತ ಲಭಿಸಿದ ಸಿಪಿಎಂಗೆ ಈ ಬಾರಿ ಕೇವಲ 30 ಮತ ಲಭಿಸಿದ್ದು, ಇದು ವಿವಾದಕ್ಕೆ ಕಾರಣವಾಗಿದೆ ಎಂದು ಬಿಜೆಪಿ ತಿಳಿಸಿದೆ. ಪಂಚಾಯತ್‌ನಲ್ಲಿ ಸಿಪಿಎಂಗೆ ಒಂದು ಸದಸ್ಯೆ ಇದ್ದು, ಆದರೆ ಮುಸ್ಲಿಂ ಲೀಗ್‌ನ ತಾಳಕ್ಕೆ ತಕ್ಕಂತೆ ಕುಣಿಯುತ್ತಿರುವುದಾಗಿ ಬಿಜೆಪಿ ಆರೋಪಿಸಿದೆ.