ಮೊಗ್ರಾಲ್ ಪುತ್ತೂರು ಪಂಚಾಯತ್ ೧೪ನೇ ವಾರ್ಡ್ ಎಸ್ಡಿಪಿಐ ಸದಸ್ಯ ದೀಕ್ಷಿತ್ ಕಲ್ಲಂಗೈ ರಾಜೀನಾಮೆ
ಮೊಗ್ರಾಲ್ ಪುತ್ತೂರು: ಮೊಗ್ರಾಲ್ ಪುತ್ತೂರು ಪಂಚಾಯತ್ ನ ೧೪ನೇ ವಾರ್ಡ್ನ ಎಸ್ಡಿಪಿಐ ಸದಸ್ಯನಾದ ದೀಕ್ಷಿತ್ ವಿ.ಆರ್. ಕಲ್ಲಂಗೈ ಅವರು ಮೊಗ್ರಾಲ್ ಪುತ್ತೂರು ಪಂಚಾಯತ್ ಕಾರ್ಯದರ್ಶಿಗೆ ತಮ್ಮ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ. ಈತಿಂಗಳ ೧೨ರಂದು ಅವರು ರಾಜೀನಾಮೆ ಸಲ್ಲಿಸಿದ್ದು, ಅದನ್ನು ಸ್ವೀಕರಿಸಿರುವು ದಾಗಿ ಕಾರ್ಯದರ್ಶಿ ತಿಳಿಸಿದ್ದಾರೆ. ಮೊಗ್ರಾಲ್ ಪುತ್ತೂರಿನ ಎಲ್ಲಾ ವಾರ್ಡ್ಗಳ ಅಭಿವೃದ್ಧಿ ನಡೆ ಯುತ್ತಿದೆ. ಆದರೆ ನಾನು ಪ್ರತಿನಿಧೀ ಕರಿಸಿದ ೧೪ನೇ ವಾರ್ಡ್ನಲ್ಲಿ ಯಾವು ದೇ ರೀತಿಯ ಅಭಿವೃದ್ಧಿ ಕೆಲಸ ನಡೆಯು ತ್ತಿಲ್ಲ. ಅದಕ್ಕೆ ಪಕ್ಷವಾಗಲೀ, ಪಂಚಾ ಯತ್ ಆಡಳಿತ ಸಮಿತಿಯಾಗಲೀ ಅಗತ್ಯದ ಸಹಕಾರ ನೀಡುತ್ತಿಲ್ಲ. ಅಭಿವೃದ್ಧಿ ಉಂಟಾಗದ ಹೆಸರಲ್ಲಿ ಜನರು ಪ್ರತಿಭಟನೆಯಲ್ಲಿ ತೊಡಗಿದ್ದು, ಆ ಹಿನ್ನೆಲೆಯಲ್ಲಿ ತಾನು ತನ್ನ ಪಂಚಾ ಯತ್ ಸದಸ್ಯತನಕ್ಕೆ ರಾಜೀನಾಮೆ ನೀಡುವುದಾಗಿ ಪಂಚಾಯತ್ ಕಾರ್ಯದರ್ಶಿಗೆ ಸಲ್ಲಿಸಿದ ರಾಜೀ ನಾಮೆ ಪತ್ರದಲ್ಲಿ ದೀಕ್ಷಿತ್ ತಿಳಿಸಿದ್ದಾರೆ.