ಮೊಗ್ರಾಲ್ ಪುತ್ತೂರು ಪಂ. ಕಚೇರಿ ಮುಂಭಾಗದಲ್ಲಿ ಬಿಜೆಪಿ ಸದಸ್ಯರಿಂದ ಧರಣಿ
ಮೊಗ್ರಾಲ್‌ಪುತ್ತೂರು: ಪಂಚಾಯತ್‌ನ ಆಡಳಿತ ಸಮಿತಿಯ ಸ್ವಜನ ಪಕ್ಷಪಾತ ನೀತಿ ಪ್ರತಿಭಟಿಸಿ ಪಂಚಾಯತ್ ಕಚೇರಿ ಮುಂಭಾಗ ಬಿಜೆಪಿ ಜನಪ್ರತಿನಿಧಿಗಳು ಒಂದು ದಿನದ ಉಪವಾಸ ಮುಷ್ಕರ ನಡೆಸಿದರು. ಕುನ್ನಿಲ್ ನೀರ್ಚಾಲ್‌ನಿಂದ ಮಜಲ್ ಉಜಿರೆಕೆರೆ ಶಾಲೆ ವರೆಗಿರುವ ರಸ್ತೆ ದುರಸ್ತಿಗೊಳಿಸಬೇಕು, ಕಂಬಾರು ಸ್ಮಶಾನದಲ್ಲಿ ಮೃತದೇಹದ ಅಂತ್ಯಕ್ರಿಯೆ ನಡೆಸಲು ನೀಡಬೇಕು, ವಾರ್ಡ್‌ಗಳಲ್ಲಿ ತೋರುವ ತಾರತಮ್ಯ ಕೊನೆಗೊಳಿಸಬೇಕು, ಬೀದಿ ದೀಪ ಯೋಜನೆ ಜ್ಯಾರಿಗೊಳಿಸಬೇಕು ಮೊದಲಾದ ಬೇಡಿಕೆ ಮುಂದಿರಿಸಿ ಬಿಜೆಪಿ ಉಪವಾಸ ಮುಷ್ಕರ ಹಮ್ಮಿಕೊಂಡಿತ್ತು. ಪಂಚಾಯತ್ ಸದಸ್ಯರಾದ ಪ್ರಮೀಳಾ ಮಜಲ್, ಸಂಪತ್ ಕುಮಾರ್, ಗಿರೀಶ, ಮಲ್ಲಿಕಾ ಪ್ರಭಾಕರ್, ಕೆ.ವಿ. ಸುಲೋಚನ ಮಾತನಾಡಿದರು.