ಮೋಟಾರು ಕಾರ್ಮಿಕರ ಕ್ಷೇಮನಿಧಿ ಬಾಕಿ ಮೊತ್ತ ಪಾವತಿಸಲು 31ರವರೆಗೆ ಅವಕಾಶ
ಕಾಸರಗೋಡು: ಕೇರಳ ಮೋಟಾರು ಕಾರ್ಮಿಕರ ಕ್ಷೇಮನಿಧಿ ಯಲ್ಲಿ ಸದಸ್ಯರಾದ ಕಾರ್ಮಿಕರಿಗೆ ಷರತ್ತುಗಳಿಗೆ ವಿಧೇಯರಾಗಿ ಬಾಕಿ ಮೊತ್ತ ಪಾವತಿಸಲು (ಒಂಭತ್ತೂವರೆ ಶೇ. ಬಡ್ಡಿ ಸೇರಿ) ಸಮಯ ಮಿತಿ ಮಾರ್ಚ್ 31ರಂದು ಕೊನೆಗೊ ಳ್ಳಲಿದೆ. ಬಾಕಿ ಉಳಿಸಿಕೊಂಡಿರುವ ಕಾರ್ಮಿಕರು ಈ ಅವಕಾಶವನ್ನು ಉಪಯೋಗಿಸಬೇಕೆಂದು ಜಿಲ್ಲಾ ಎಕ್ಸಿಕ್ಯೂಟಿವ್ ಆಫೀಸರ್ ತಿಳಿಸಿದ್ದಾರೆ. 0467 2205380ರಿಂದ ಹೆಚ್ಚಿನ ಮಾಹಿತಿ ಲಭಿಸುವುದು.