ಮೋಟಾರ್ ಪಂಪ್ ಕಳ್ಳರ ಹಾವಳಿ: ಶೇಣಿಯಿಂದ ನಾಲ್ಕು ಮೋಟಾರ್ ಕಳವು
ಬದಿಯಡ್ಕ: ಮಳೆಗಾಲದಲ್ಲಿ ಮನೆಗೆ ನುಗ್ಗುವ ಕಳ್ಳರ ಬೆನ್ನಲ್ಲೇ ಮೋಟಾರ್ ಪಂಪ್ ಕಳ್ಳರ ಹಾವಳಿಯೂ ತೀವ್ರಗೊಂಡಿದೆ.
ಪೆರ್ಲ ಬಳಿಯ ಶೇಣಿಯಿಂದ ಇತ್ತೀಚೆಗೆ ನಾಲ್ಕು ಮೋಟಾರು ಪಂಪುಗಳು ಕಳವಿಗೀಡಾಗಿವೆ. ಅಲ್ಲಿನ ಸದಾಶಿವ ಆಚಾರ್ಯರ ಶೆಡ್ನಿಂದ 2 ಮೋಟಾರುಗಳು, ಅಬ್ದುಲ್ಲ, ರಘುರಾಮ ಎಂಬಿವರ ಮನೆಗಳಿಂದ ಎರಡು ಮೋಟಾರ್ಗಳು ಕಳವಿಗೀಡಾದ ಬಗ್ಗೆ ದೂರಲಾಗಿದೆ. ಈ ಬಗ್ಗೆ ಲಭಿಸಿದ ದೂರಿನಂತೆ ಬದಿಯಡ್ಕ ಪೊಲೀಸರು ಕೇಸು ದಾಖಲಿಸಿ, ತನಿಖೆ ಆರಂಭಿಸಿ ದ್ದಾರೆ. ರಾತ್ರಿ ಹೊತ್ತಿನಲ್ಲಿ ವಾಹನಗಳಲ್ಲಿ ತಲುಪಿದ ಕಳ್ಳರು ಮೋಟಾರ್ ಪಂಪುಗಳನ್ನು ಕದ್ದೊಯ್ದಿರುವುದಾಗಿ ಸಂಶಯಿಸಲಾಗಿದೆ. ಬೇಸಿಗೆ ಕಾಲದಲ್ಲಿ ಬಾವಿ, ಕೆರೆಗಳಿಂದ ನೀರೆತ್ತಲು ಬಳಸುವ ಮೋಟಾರ್ ಪಂಪ್ಗಳನ್ನು ಮಳೆಗಾಲ ಆರಂಭಗೊಂಡಾಗ ಕಳಚಿ ತೆಗೆದಿರಿಸಲಾಗಿತ್ತು. ಅದನ್ನು ಕಳ್ಳರು ಅಪಹರಿಸಿದ್ದಾರೆ. ಮೋಟಾರ್ ಪಂಪು ಕಳ್ಳರು ಇನ್ನು ಕೂಡಾ ತಲುಪಲು ಸಾಧ್ಯತೆ ಇದೆಯೆಂದೂ ಆದ್ದರಿಂದ ಕೃಷಿಕರು ಜಾಗ್ರತೆ ಪಾಲಿಸಬೇಕೆಂದು ಪೊಲೀಸರು ಮುನ್ನೆಚ್ಚರಿಕೆ ನೀಡಿದ್ದಾರೆ.