ಮೋನಿಯಾ ಜ್ವರ ಬಾಧಿಸಿ ಬಾಲಕಿ ಮೃತ್ಯು

ಬದಿಯಡ್ಕ: ನ್ಯುಮೋನಿಯ ಜ್ವರ ಬಾಧಿಸಿ ನಾಲ್ಕರ ಹರೆಯದ ಬಾಲಕಿ ಮೃತಪಟ್ಟ ದಾರುಣ ಘಟನೆ ಸಂಭವಿಸಿದೆ.

ನೀರ್ಚಾಲು ಸಮೀಪದ ಪುದುಕೋಳಿ ನಿವಾಸಿ, ಕಾಸರಗೋಡಿನಲ್ಲಿ ಕೆನರಾ ಬ್ಯಾಂಕ್ ನೌಕರನಾದ ಹರೀಶ್ ಹಾಗೂ ಮೊಗ್ರಾಲ್ ಪುತ್ತೂರು ಹೈಯರ್ ಸೆಕೆಂಡರಿ ಶಾಲೆ ಅಧ್ಯಾಪಿಕೆ ಕುಸುಮ ದಂಪತಿಯ ಪುತ್ರಿ ಭೂಮಿಕಾ ಮೃತಪಟ್ಟ ಬಾಲಕಿ.

ಜ್ವರ ಬಾಧಿಸಿದ್ದ ಭೂಮಿಕಾಳಿಗೆ ಕಾಸರಗೋಡಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ್ದು, ಬಳಿಕ ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ನಿಧನ ಸಂಭವಿಸಿದೆ. ಮೃತ ಬಾಲಕಿ ತಂದೆ, ತಾಯಿ, ಸಹೋದರಿ ಕಾರ್ತಿಕ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾಳೆ.

You cannot copy contents of this page