ಮೋನ್ಸನ್ ಮಾವುಂಗಲ್‌ನ ೧.೮೮ ಕೋಟಿ ರೂ.ಗಳ ಸೊತ್ತು ಮುಟ್ಟುಗೋಲು
ಕೊಚ್ಚಿ: ಪುರಾವಸ್ತು ಹೆಸರಲ್ಲಿ ವಂಚನೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ಮೋನ್ಸನ್ ಮಾವುಂಗಲ್‌ನ ೧.೮೮ ಕೋಟಿ ರೂಪಾಯಿಗಳ ಸೊತ್ತುಗಳನ್ನು ಎನ್‌ಫೋರ್ಸ್‌ಮೆಂಟ್ ಡೈರೆಕ್ಟರೇಟ್ (ಇ.ಡಿ) ಮುಟ್ಟು ಗೋಲು ಹಾಕಿಕೊಂಡಿದೆ. ಕಾಳಧನ ಬಿಳುಪಿಸುವಿಕೆ ನಿಷೇಧ ನಿಯಮ ೨೦೦೨ರ ಕಾಯ್ದೆಗಳ ಪ್ರಕಾರ ಮೋನ್ಸನ್ ಹಾಗೂ ಕುಟುಂಬ ಸದಸ್ಯರ ಹೆಸರಲ್ಲಿರುವ ಸೊತ್ತುಗಳನ್ನು ಮುಟ್ಟುಗೋಲು ಹಾಕಲಾಗಿದೆ.
ಮೋನ್ಸನ್ ಮಾವುಂಗಲ್ ನಕಲಿ ಪುರಾವಸ್ತುಗಳನ್ನು ತೋರಿಸಿ ಗ್ರಾಹಕರನ್ನು ವಂಚಿಸಿರುವುದಾಗಿ ಇ.ಡಿ ತನಿಖೆಯಲ್ಲಿ ಪತ್ತೆಹಚ್ಚಿದೆ.