ಮೋಪಾಲ ಶ್ರೀ ಮಹಾವಿಷ್ಣು ಕ್ಷೇತ್ರ ಜೀರ್ಣೋದ್ಧಾರ ಸಮಿತಿ ಸಭೆ
ಎಡನೀರು: ಎಡನೀರು ಸಮೀಪದ ಮೋಪಾಲ ಶ್ರೀ ಮಹಾವಿಷ್ಣು ಕ್ಷೇತ್ರದ ಜೀರ್ಣೋದ್ಧಾರ ಸಮಿತಿ ಸಭೆಯು ಕ್ಷೇತ್ರ ಪರಿಸರದಲ್ಲಿ ಇತ್ತೀಚೆಗೆ ನಡೆಯಿತು. ನವೀನ್ ಕುಮಾರ್ ಭಟ್ ಕುಂಜರಕಾನ ಅಧ್ಯಕ್ಷತೆ ವಹಿಸಿ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳ ಕುರಿತು ವಿವರಿಸಿದರು. ಜೀರ್ಣೋದ್ಧಾರ ನಿದಿs ಕೂಪನ್ ಲಕ್ಕಿ ಡ್ರಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಇತ್ತೀಚೆಗೆ ನಿಧನರಾದ ಮಲ್ಲ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಆಡಳಿತ ಮೊಕ್ತೇಸರ ಆನೆಮಜಲು ವಿಷ್ಣು ಭಟ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಸಮಿತಿಯ ಕಾರ್ಯದರ್ಶಿ ಕೆ.ಎಂ. ಶರ್ಮಾ ಎಡನೀರು ಸ್ವಾಗತಿಸಿ, ಲೆಕ್ಕಪತ್ರ ವಿವರಗಳನ್ನು ನೀಡಿದರು. ಗೋವಿಂದ ಭಟ್ ಕೆ., ವಾಮನ ಆಚಾರ್ಯ, ವಾಸುದೇವ ಭಟ್ ಸಿ.ಎಚ್., ಬಾಲಕೃಷ್ಣ ಮೂರ್ತಿ ಪಿ. ಉಪಸ್ಥಿತರಿದ್ದರು. ಜ.15ರಿಂದ ಜ.22ರ ತನಕ ಶ್ರೀಕ್ಷೇತ್ರ ಸನ್ನಿಯಲ್ಲಿ ನಡೆಯಲಿರುವ ರಾಮಾಯಣ ಪಾರಾಯಣ, ಪ್ರವಚನ ವಿವರಗಳನ್ನು ಸಭೆಗೆ ತಿಳಿಸಲಾಯಿತು. ಈಶ್ವರ ಭಟ್ ವಂದಿಸಿದರು.