ಯಕ್ಷಸಿರಿ ನಾಟ್ಯವೃಂದದಿಂದ ಎಂ.ನಾ. ಚಂಬಲ್ತಿಮಾರ್ಗೆ ಗೌರವಾರ್ಪಣೆ
ಮಂಗಳೂರು: ಯಕ್ಷಗಾನಕ್ಕಾಗಿ ಅಕ್ಷರ ಮುದ್ರಿಸಿ ಯಕ್ಷ ವಲಯದಲ್ಲಿ ಗುರುತಿಸಿಕೊಂಡಿದ್ದ ಕಣಿಪುರ ಮಾಸಪತ್ರಿಕೆಯ ಸಂಪಾದಕ ಎಂ.ನಾ. ಚಂಬಲ್ತಿಮಾರ್ರಿಗೆ ಚಿಕ್ಕಮಗಳೂರು ಹವ್ಯಾಸಿ ಕಲಾವಿದರ ಯಕ್ಷಸಿರಿ ನಾಟ್ಯವೃಂದ ಗೌರವಾಭಿನಂದನೆ ಸಲ್ಲಿಸಿದೆ. ಅಲ್ಲಿನ ಕುವೆಂಪು ಕಲಾಮಂದಿರದಲ್ಲಿ ಜರಗಿದ ಯಕ್ಷಗಾನ ಪ್ರದರ್ಶನ ಸಂದರ್ಭದಲ್ಲಿ ಎಂ.ನಾ ರಿಗೆ ‘ಯಕ್ಷ ಪ್ರಚಾರೋತ್ತಮ’ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಈ ವೇಳೆ ಮಾತನಾಡಿದ ಎಂ.ನಾ. ಚಂಬಲ್ತಿಮಾರ್ ಕರಾವಳಿಯಿಂದ ಬೆಟ್ಟಏರಿ ಕಾಫಿಯ ನಾಡಿನಲ್ಲಿ ಸ್ವಯಂ ಪ್ರಚೋದಿತರಾಗಿ ತೆಂಕಿನಾಟದ ಪ್ರದರ್ಶನ ನೀಡಿರುವುದು ವಿಶೇಷ ಎಂದು ಅಭಿಪ್ರಾಯಪಟ್ಟರು.
ಶಾಸಕ ಎಚ್.ಡಿ. ತಮ್ಮಯ್ಯ ಯಕ್ಷಗಾನ ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು. ಕಲ್ಕಟ್ಟೆ ಪುಸ್ತಕದ ಮನೆಯ ಮಹಾಪೋಷಕ ಡಾ. ಜೆ.ಪಿ. ಕೃಷ್ಣೇಗೌಡ, ಯಕ್ಷಗಾನ ಬಳಗದ ಎಚ್.ಎನ್. ನಾಗರಾಜ ರಾವ್, ಯಕ್ಷಸಿರಿಯ ನಿರ್ದೇಶಕ ಪರಮೇಶ್ವರ, ಮಲ್ಲಿಗೆ ಸುಧೀರ್, ರೇಖಾ ನಾಗರಾಜ ರಾವ್, ಕುಲಶೇಖರ, ಉಜ್ವಲ ಪಡುಬಿದ್ರೆ, ಆನಂದ ಕುಮಾರ್ ಶೆಟ್ಟಿ, ರಮೇಶ್, ರಾಕೇಶ್, ಸುಧೀರ್ ಭಾಗವಹಿಸಿದರು.