ಯುಡಿಎಫ್ನಿಂದ ಮಧೂರು ಪಂಚಾಯತ್ ಮುಂಭಾಗ ಉಪವಾಸ ಸತ್ಯಾಗ್ರಹ
ಮಧೂರು: ಮಧೂರು ಪಂಚಾಯತ್ ಭ್ರಷ್ಟಾಚಾರ ಆಡಳಿತ ಕೊನೆಗೊಳಿಸಬೇಕು, ಅಧ್ಯಕ್ಷ ರಾಜೀನಾಮೆ ನೀಡಬೇಕು ಮೊದಲಾದ ಬೇಡಿಕೆಗಳನ್ನು ಮುಂದಿಟ್ಟು ಯುಡಿಎಫ್ ಪಂಚಾಯತ್ ಸಮಿತಿ ಆಶ್ರಯದಲ್ಲಿ ಪಂಚಾಯತ್ ಕಚೇರಿ ಮುಂಭಾಗದಲ್ಲಿ ಉಪವಾಸ ಮುಷ್ಕರ ನಡೆಸಲಾಯಿತು. ಮುಸ್ಲಿಂ ಲೀಗ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎ. ಅಬ್ದುಲ್ ರಹ್ಮಾನ್ ಉದ್ಘಾಟಿಸಿದರು. ಮಧೂರು ಪಂಚಾಯತ್ ಸಮಿತಿ ಅಧ್ಯಕ್ಷ ಹಾರಿಸ್ ಸೂರ್ಲು ಅಧ್ಯಕ್ಷತೆ ವಹಿಸಿದರು. ಕೆಪಿಸಿಸಿ ಕಾರ್ಯದರ್ಶಿ ಕೆ. ನೀಲಕಂಠನ್ ಪ್ರಧಾನ ಭಾಷಣ ಮಾಡಿದರು.
ಯುಡಿಎಫ್ ಕಾಸರಗೋಡು ಮಂಡಲ ಅಧ್ಯಕ್ಷ ಮಾಹಿನ್ ಕೇಳೋಟ್, ಬ್ಲೋಕ್ ಕಾಂಗ್ರೆಸ್ ಅಧ್ಯಕ್ಷ ಎಂ. ರಾಜೀವನ್ ನಂಬ್ಯಾರ್, ಮುಸ್ಲಿಂ ಲೀಗ್ ಮಧೂರು ಪಂ. ಅಧ್ಯಕ್ಷ ಶಂಸುದ್ದೀನ್, ಮಜೀದ್ ಪಟ್ಲ, ಸಿ.ಎ. ಸೈಮ, ಜಮೀಲಾ ಅಹಮ್ಮದ್, ಪಂಚಾಯತ್ ಸದಸ್ಯರು ಹಾಗೂ ಕಾರ್ಯಕರ್ತರು ಭಾಗವಹಿಸಿದರು. ಪಿ.ಪಿ. ಸುಮಿತ್ರನ್ ಸ್ವಾಗತಿಸಿದರು.