ಯುವಕನನ್ನು ಪೊಲೀಸ್ ಠಾಣೆಯಿಂದ ಕರೆದೊಯ್ದು ಕೊಲೆಗೈದ ಪ್ರಕರಣ: ಮತ್ತಿಬ್ಬರು ಆರೋಪಿಗಳ ಬಂಧನ
ಮಂಜೇಶ್ವರ: ಪೊಲೀಸರ ಕಸ್ಟಡಿಯಲ್ಲಿದ್ದ ಯುವಕನನ್ನು ಜಾಮೀನಿನಲ್ಲಿ ಬಿಡುಗಡೆಗೊಳಿಸಿ ಕರೆದೊಯ್ದು ಬಳಿಕ ಆತನಿಗೆ ಹಲ್ಲೆಗೈದು ಕೊಲೆ ನಡೆಸಿದ ಪ್ರಕರಣದಲ್ಲಿ ಮತ್ತಿಬ್ಬರು ಆರೋಪಿಗಳನ್ನು ಮಂಜೇಶ್ವರ ಇನ್‌ಸ್ಪೆಕ್ಟರ್ ಕೆ. ರಾಜೀವ್ ಕುಮಾರ್ ನೇತೃತ್ವದ ಪೊಲೀಸರು ಬಂಧಿಸಿದ್ದಾರೆ.
ಕುಂಜತ್ತೂರು ಕಣ್ವತೀರ್ಥ ರೈಲ್ವೇ ಗೇಟ್ ಬಳಿಯ ನಿವಾಸಿಗಳಾದ ಶೌಕತ್ತಲಿ (೩೯), ಅಬೂಬಕರ್ ಸಿದ್ದಿಕ್ (೩೩) ಎಂಬಿವರು ಬಂಧಿತ ಆರೋಪಿಗಳಾಗಿದ್ದಾರೆ.
ಮೀಯಪದವು ಮದಕ್ಕಳದ ದಿ| ಅಬ್ದುಲ್ಲರ ಪುತ್ರ ಮೊಯ್ದೀನ್ ಆರಿಫ್ (೨೨)ನನ್ನು ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಈ ಇಬ್ಬರನ್ನು ಬಂಧಿಸಲಾ ಗಿದೆ. ಇವರನ್ನು ಇಂದು ನ್ಯಾಯಾಲ ಯದಲ್ಲಿ ಹಾಜರು ಪಡಿಸಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿ ಕುಂಜತ್ತೂರು ಕಣ್ವತೀರ್ಥ ಇರ್ಶಾದ್ ಮಂಜಿಲ್‌ನ ಅಬ್ದುಲ್ ರಶೀದ್ (೨೮) ಎಂಬಾತನನ್ನು ಮೊನ್ನೆ ಬಂಧಿಸಲಾಗಿತ್ತು. ಈತನಿಗೆ ನ್ಯಾಯಾಲಯ ರಿಮಾಂಡ್ ವಿಧಿಸಿದೆ. ಈ ಕೊಲೆ ಪ್ರಕರಣದಲ್ಲಿ ಇನ್ನೂ ಆರು ಮಂದಿ ಆರೋಪಿಗಳಿದ್ದಾರೆಂದು ಪೊಲೀ ಸರು ತಿಳಿಸಿದ್ದಾರೆ. ಘಟನೆ ಬಳಿಕ ಈ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ
ಬೆಂಗಳೂರು ಹಾಗೂ ಚೆನ್ನೈಗೆ ಇವರು ಪರಾರಿಯಾಗಿದ್ದಾರೆಂದು ಮಾಹಿತಿ ಲಭಿಸಿದೆ. ಈ ಹಿನ್ನೆಲೆಯಲ್ಲಿ ತನಿಖೆಯನ್ನು ಕರ್ನಾಟಕ ಹಾಗೂ ತಮಿಳುನಾಡಿಗೆ ವಿಸ್ತರಿಸಲು ಪೊಲೀಸರು ನಿರ್ಧರಿಸಿದ್ದಾರೆ. ಮಂಜೇಶ್ವರ ಇನ್‌ಸ್ಪೆಕ್ಟರ್ ಕೆ. ರಾಜೀವ್ ಕುಮಾರ್ ನೇತೃತ್ವದಲ್ಲಿ ತನಿಖೆ ಮುಂದುವರಿಯುತ್ತಿದೆ. ಗಾಂಜಾ ಸೇವಿಸಿ ಬೊಬ್ಬೆ ಹಾಕಿದ ಆರೋಪದಂತೆ ಕಳೆದ ಆದಿತ್ಯವಾರ ರಾತ್ರಿ ಮೊಯ್ದೀನ್ ಆರಿಫ್‌ನನ್ನು ಪೊಲೀಸರು ಬಂಧಿಸಿದ್ದರು. ಬಳಿಕ ಆತನನ್ನು ಸಹೋದರಿಯ ಪತಿಯಾದ ಅಬ್ದುಲ್ ರಶೀದ್ ಜಾಮೀನಿನಲ್ಲಿ ಬಿಡುಗಡೆಗೊಳಿಸಿ ಕರೆದೊಯ್ದಿದ್ದನು. ಈ ವಿಷಯ ತಿಳಿದು ಇದೀಗ ಸೆರೆಗೀಡಾದ ಆರೋಪಿಗಳ ಸಹಿತ ಒಂಭತ್ತು ಮಂದಿ ತಲುಪಿ ಮೊಯ್ದೀನ್ ಆರಿಫ್‌ನನ್ನು ತೂಮಿನಾಡು ಮೈದಾನಕ್ಕೆ ತಲು ಪಿಸಿದ್ದಾರೆ. ಅಲ್ಲಿ ಅವರೆಲ್ಲ ಆತನಿಗೆ ಹಲ್ಲೆಗೈದಿದ್ದು ಇದರಿಂದ ಆಂತರಿಕ ಅವಯವಗಳಿಗೆ ಹೊಡೆತ ಬಿದ್ದಿ ತ್ತೆನ್ನಲಾಗಿದೆ. ತಂಡದಿಂದ ಹಲ್ಲೆಗೀಡಾಗಿದ್ದ ಮೊಯ್ದೀನ್ ಆರಿಫ್ ಮರುದಿನ ಮನೆಯಲ್ಲಿ ರಕ್ತವಾಂತಿ ಮಾಡಿದ್ದನು. ಇದರಿಂದ ಮಂಗ ಳೂರಿನ ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಿರಲಿಲ್ಲ. ಅನಂತರ ಮೃತದೇಹ ಕಂಡ ಸಂಬಂಧಿಕರಿಗೆ ಸಂಶ ಯವುಂಟಾಗಿದ್ದು, ಇದರಿಂದ ಪರಿಯಾರಂ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದಾಗಲೇ ಯುವಕನ ಸಾವಿಗೆ ಕಾರಣ ಹಲ್ಲೆಯ ಗಾಯಗಳಾ ಗಿವೆಯೆಂದು ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಮೊದಲು ಅಬ್ದುಲ್ ರಶೀದ್‌ನನ್ನು ಪೊಲೀಸರು ಕಸ್ಟಡಿಗೆ ತೆಗೆದು ತನಿಖೆಗೊಳಪಡಿಸಿದಾಗ ಕೃತ್ಯ ಬೆಳಕಿಗೆ ಬಂದಿದೆ.