ಯುವಕನನ್ನು ಪೋಕ್ಸೋ ಪ್ರಕರಣದಲ್ಲಿ ಸಿಲುಕಿಸಿದ ಯುವತಿ, ತಾಯಿ ವಿರುದ್ಧ ಕೇಸು
ಕಾಸರಗೋಡು: ಪೋಕ್ಸೋ ಕಾನೂನನ್ನು ದುರುಪಯೋಗ ಪಡಿಸಿದ ತಾಯಿ ಮತ್ತು ಮಗಳ ವಿರುದ್ಧ ಪೊಲೀ ಸರು ಪ್ರಕರಣ ದಾಖಲಿಸಿಕೊಂ ಡಿದ್ದಾರೆ.
ತಲಶ್ಶೇರಿ ಎಡಯನ್ನೂರಿನ ಮೆರ್ಸಿ ಮಾಥ್ಯು (೬೬) ಮತ್ತು ಆಕೆಯ ಪುತ್ರಿ ಬಿಂದು (೩೬) ಎಂಬವರ ವಿರುದ್ಧ ತಲಶ್ಶೇರಿ ಪೊಲೀಸರು ಈ ಪ್ರಕರಣ ದಾಖಲಿಸಿಕೊಂಡಿದ್ದಾರೆ.ಕಾಸರಗೋಡು ವೆಳ್ಳರಿಕುಂಡು ನಿವಾಸಿ ಇ.ಕೆ. ಮನೋಜ್ (ಥೋಮಸ್) ಎಂಬವರ ಪತ್ನಿಯಾಗಿದ್ದಾಳೆ ಬಿಂದು. ಇವರ ದಾಂಪತ್ಯದಲ್ಲಿ ಇತ್ತೀಚೆಗೆ ಬಿರುಕು ಉಂಟಾಗಿ ಅದರ ಹೆಸರಲ್ಲಿ ಅವರಿಬ್ಬರು ವಿವಾಹ ವಿಚ್ಚೇಧನ ಕೋರಿ ತಲಶ್ಶೇರಿ ಕುಟುಂಬ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಅರ್ಜಿಯನ್ನು ಪರಿಶೀಲಿಸಿದ ನ್ಯಾಯಾಲಯ ಈ ದಂಪತಿಯ ಪುತ್ರನನ್ನು ತಂದೆ ಮನೋಜ್‌ನ ಜತೆ ಕಳುಹಿಸಿಕೊಡು ವಂತೆ ನವಂಬರ್ ೨೬ರಂದು ಆದೇಶ ನೀಡಿತ್ತು. ಇದೇ ಸಂದರ್ಭದಲ್ಲಿ ಪುತ್ರನಿಗೆ ಕಿರುಕುಳ ನೀಡಲೆತ್ನಿಸಿರು ವುದಾಗಿ ಆರೋಪಿಸಿ ನ. ೨೭ರಂದು ಬಿಂದು ಮನೋಜ್ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಳು. ಅದರಂತೆ ಪೊಲೀಸರು ಮನೋಜ್ ವಿರುದ್ಧ ಪೋಕ್ಸೋ ಕಾನೂನು ಪ್ರಕಾರ ಪ್ರಕರಣ ದಾಖಲಿಸಿ ಆತನನ್ನು ಬಂಧಿಸಿದ್ದರು. ಅನಂತರ ಪೊಲೀಸರು ನಡೆಸಿದ ತನಿಖೆಯಲ್ಲಿ ನ್ಯಾಯಾಲಯ ದ ಆದೇಶ ಪ್ರಕಾರ ಪುತ್ರನನ್ನು ಮನೋಜ್‌ನ ಜತೆ ಕಳುಹಿಸಿ ಕೊಡುವು ದನ್ನು ತಡೆಗಟ್ಟುವ ಉದ್ದೇಶದಿಂದ ಬಿಂದು ಮತ್ತು ಆಕೆಯ ತಾಯಿ ಸೇರಿ ಮನೋಜ್‌ನ ಮೇಲೆ ಹಲ್ಲೆ ನಡೆಸಿದ್ದ ರೆಂದೂ, ಅದಕ್ಕೆ ಸಂಬಂಧಿಸಿ ಆತ ದೂರು ನೀಡದೇ ಇರುವಂತೆ ಮಾಡಲು ಪುತ್ರನಿಗೆ ಮನೋಜ್ ಕಿಕುರುಳ ನೀಡಿದನೆಂದು ದೂರಿ ಪತ್ನಿ ಬಳಿಕ ಪೊಲೀಸರಿಗೆ ದೂರು ನೀಡಿದ್ದಾಳೆಂದೂ, ಅದರ ಹಿಂದೆ ಭಾರೀ ಒಳಸಂಚನ್ನು ಆಕೆ ಮತ್ತು ತಾಯಿ ಹೂಡಿದ್ದಾರೆಂದು ಸ್ಪಷ್ಟಗೊಂ ಡಿತ್ತು. ಆ ತನಿಖಾ ವರದಿಯನ್ನು ಬಳಿಕ ನ್ಯಾಯಾ ಲಯಕ್ಕೂ ಸಲ್ಲಿಸಿದ್ದಾರೆ. ಆ ವರದಿಯನ್ನು ಪರಿಶೀಲಿಸಿ ಕೊನೆಗೆ ನ್ಯಾಯಾಲಯ ನೀಡಿದ ನಿರ್ದೇಶ ಪ್ರಕಾರ ಪೋಕ್ಸೋ ಕಾನೂನನ್ನು ದುರುಪಯೋಗಗೈದ ಆರೋಪದಂತೆ ಬಿಂದು ಮತ್ತು ಆಕೆಯ ತಾಯಿ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡರು.