ಯುವಕನಿಗೆ ಹಲ್ಲೆಗೈದು ಕಾರಿಗೆ ಹಾನಿ: 26 ಮಂದಿ ವಿರುದ್ಧ ಕೇಸು
ಕುಂಬಳೆ: ಮಂಜೇಶ್ವರ ಹೊಸಬೆಟ್ಟು ನಿವಾಸಿ ಅಬ್ದುಲ್ ನಿಸಾಮುದ್ದೀನ್ (25) ಎಂಬವರಿಗೆ ಹಲ್ಲೆಗೈದು ಅವರ ಕಾರಿಗೆ ಹಾನಿಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿ 26 ಮಂದಿ ವಿರುದ್ಧ ಕುಂಬಳೆ ಪೊಲೀಸರು ಕೇಸು ದಾಖಲಿಸಿಕೊಂ ಡಿದ್ದಾರೆ. ಅಕ್ಬರ್, ಮಮ್ಮುಂಞಿ, ಉಂಬಾಯಿ, ಸಾಕಿರ್, ಸಯ್ಯಿದ್ ನಿಸಾಂ, ನೂರ್ಜಾ ಎಂಬಿವರು ಹಾಗೂ ಕಂಡರೆ ಪತ್ತೆಹಚ್ಚಬಹುದಾದ 20 ಮಂದಿ ವಿರುದ್ಧ ಕೇಸು ದಾಖಲಿಸ ಲಾಗಿದೆಯೆಂದು ಪೊಲೀಸರು ತಿಳಿಸಿದ್ದಾರೆ. ಮೊನ್ನೆ ಸಂಜೆ ಕುಬಣೂರು ಜುಮಾ ಮಸೀದಿಯ ಮುಂಬಾಗ ತಂಡವೊಂದು ಅಬ್ದುಲ್ ನಿಸಾಮುದ್ದೀನ್ಗೆ ಹಲ್ಲೆಗೈದಿದೆ. ಅಲ್ಲದೆ ಅವರ ಕಾರಿಗೆ ಹಾನಿಗೊಳಿರುವುದಾಗಿ ದೂರಲಾಗಿದೆ. ಅಬ್ದುಲ್ ನಿಸಾಮುದ್ದೀನ್ರ ಸಂಸ್ಥೆಯಲ್ಲಿ ಕೆಲಸಕ್ಕಿದ್ದ ಮಮ್ಮುಂಞಿಯ ಪುತ್ರನನ್ನು ಹೊರಹಾಕಿದ ದ್ವೇಷದಿಂದ ಮಮ್ಮುಂಞಿ ಸಹಿತ ತಂಡ ಹಲ್ಲೆಗೈದಿರುವುದಾಗಿ ದೂರಲಾಗಿದೆ.