ಯುವಕನ ಕೊಲೆ :ಇನ್ನೋರ್ವನಿಗೆ ಇರಿತ
ತೃಶೂರು: ತೃಶೂರು ವಡಕಾಂ ಚೇರಿಯಲ್ಲಿ ಯುವಕನೋರ್ವನನ್ನು ಇರಿದು ಕೊಲೆಗೈಯ್ಯಲಾಗಿದೆ. ವಡಕ್ಕಾಂಚೇರಿ ನಿವಾಸಿ ಸೇವಿಯರ್ (45) ಕೊಲೆಗೈಯ್ಯಲ್ಪಟ್ಟ ಯುವಕ. ಈತನ ಜತೆಗಿದ್ದ ಅನೀಶ್ ಎಂಬಾತ ಇರಿತಕ್ಕೊಳಗಾಗಿದ್ದು, ಆತನನ್ನು ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.
ಹಲವು ಕ್ರಿಮಿನಲ್ ಪ್ರಕರಣ ಗಳಲ್ಲಿ ಆರೋಪಿಯಾಗಿರುವ ವಿಷ್ಣು ಎಂಬಾತ ಸೇವಿಯರ್‌ರನ್ನು ಇರಿದಿರುವುದಾಗಿ ಆರೋಪಿ ಸಲಾಗಿದೆ. ಆತ ಬಳಿಕ ತಲೆಮ ರೆಸಿಕೊಂಡಿದ್ದಾನೆ. ಸೇವಿಯರ್ ಮತ್ತು ಅನೀಶ್ ಸೇರಿ ಆರೋಪಿ ವಿಷ್ಣುವಿನ ಮನೆಗೆ ಅಕ್ರಮವಾಗಿ ನುಗ್ಗಿ ಆತನ ಮೇಲೆ ಹಲ್ಲೆ ನಡೆಸಲೆತ್ನಿಸಿದರೆಂದೂ, ಆ ವೇಳೆ ವಿಷ್ಣು ಅವರಿಬ್ಬರಿಗೆ ಇರಿದಿರುವುದಾಗಿ ಆರೋಪಿ ಸಲಾಗಿದೆ. ಇರಿತದಿಂದ ಗಂಭೀರ ಗಾಯಗೊಂಡ ಸೇವಿಯರ್‌ನ್ನು ತೃಶೂರು ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಯಿತಾದರೂ ಅದು ಫಲಕಾರಿಯಾಗದೆ ಆತ ಅಲ್ಲೇ ಅಸುನೀಗಿದ್ದಾನೆ. ಪೊಲೀಸರು ಈ ಬಗ್ಗೆ ಕೇಸು ದಾಖಲಿಸಿದ್ದಾರೆ.