ಯುವಕ ಕುಸಿದುಬಿದ್ದು ಮೃತ್ಯು
ಪೆರ್ಲ: ಊಟಮಾಡಿ ವಿಶ್ರಾಂತಿ ಪಡೆಯುತ್ತಿದ್ದ ವೇಳೆ ಕುಸಿದು ಬಿದ್ದ ಯುವಕನನ್ನು ಕೂಡಲೇ ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾ ಗಲಿಲ್ಲ. ಕಾಟು ಕುಕ್ಕೆ ನಿವಾಸಿ ದಿ| ಕೋಶಿ ಜೋನಿ ಎಂಬವರ ಪುತ್ರ ಅಲ್ವಿನ್ ಜೋಶಿ (28) ಮೃತಪಟ್ಟ ಯುವಕ. ಇವರು ನಿನ್ನೆ ಮಧ್ಯಾಹ್ನ ಮನೆಯಲ್ಲಿ ಊಟ ಮಾಡಿ ಕುಳಿತು ಕೊಂಡಿದ್ದ ವೇಳೆ ಕುಸಿದುಬಿದ್ದಿದ್ದರು. ಕೂಡಲೇ ಚೆಂ ಗಳದ ಸಹಕಾರಿ ಆಸ್ಪತ್ರೆಗೆ ತಲುಪಿಸಿ ದರೂ ಜೀವ ರಕ್ಷಿಸಲಾಗಲಿಲ್ಲ.
ಮೃತರು ತಾಯಿ ಆಟ್ಲಿ ಮ್ಯಾಥ್ಯು, ಸಹೋದರ ಅಶ್ವಿನ್ ಜೋಜಿನ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.