ಯುವಕ ನೇಣುಬಿಗಿದು ಆತ್ಮಹತ್ಯೆ
ಮಂಜೇಶ್ವರ: ಕುಂಜತ್ತೂರು ಮರಿಯಾಶ್ರಮ ಚರ್ಚ್ ಕಾಂಪೌಂಡ್ ನಿವಾಸಿ, ಮಂಗಳೂರು ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಬ್ರಯಾನ್ ಎಲ್ಟನ್ ಪಿಂಟೋ (20) ನೇಣುಬಿಗಿದು ಆತ್ಮಹತ್ಯೆಗೈದ ಘಟನೆ ನಡೆದಿದೆ. ನಿನ್ನೆ ಬೆಳಿಗ್ಗೆ ಮನೆಯಿಂದ ೫೦೦ ಮೀಟರ್ ದೂರದ ಇವರ ಹಳೆ ಮನೆಯಲ್ಲಿ ಈತ ನೇಣುಬಿಗಿದು ಆತ್ಮಹತ್ಯೆಗೈದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಮೊನ್ನೆ ರಾತ್ರಿ ಮನೆಯಿಂದ ಹೊರಹೋದ ಇವರು ನಾಪತ್ತೆಯಾಗಿದ್ದು, ಹುಡುಕಾಡುತ್ತಿದ್ದ ಮಧ್ಯೆ ಸ್ಕೂಟರ್ ಹಳೆ ಮನೆ ಬಳಿ ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಹುಡುಕಾಡಿದಾಗ ಮನೆಯೊಳಗೆ ಮೃತದೇಹ ಕಂಡುಬಂದಿದೆ. ಸ್ಥಳಕ್ಕೆ ಮಂಜೇಶ್ವರ ಪೊಲೀಸರು ತಲುಪಿ ಪ್ರಕರಣ ದಾಖಲಿಸಿದ್ದಾರೆ. ಮೃತ ಯುವಕ ತಂದೆ ಬೆನೆಟ್ ಪಿಂಟೋ, ತಾಯಿ ಈನೆಟ್ ಪಿಂಟೋ, ಸಹೋದರಿ ಪ್ರಿಯೋನಾ ಪಿಂಟೋ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.