ಯುವಕ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆ
ಹೊಸದುರ್ಗ: ನಿರ್ಮಾಣ ಹಂತದಲ್ಲಿರುವ ಮನೆಯೊಳಗೆ ಯುವಕ ನೇಣು ಬಿಗಿದು ಸಾವಿಗೀ ಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಕಾಞಂಗಾಡ್ ರಾವಣೇಶ್ವರ ಮಾಕಿಯ ಕುಂಞಿರಾಮನ್- ಲಲಿತ ದಂಪತಿಯ ಪುತ್ರ ಎಂ. ಸುರೇಶ್ (೨೧) ಮೃತಪಟ್ಟ ಯುವಕ. ನಿರ್ಮಾಣ ನಡೆಯುತ್ತಿರುವ ಎರಡಂತಸ್ತಿನ ಮನೆಯ ಮೇಲಿನ ಮಹಡಿಯ ಹಾಲ್ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದನು. ಕೂಡಲೇ ಮಾವುಂಗಲ್ನ ಖಾಸಗಿ ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ. ಸುರೇಶ್ ಕಾಞಂಗಾಡ್ ಅಂಗಡಿಯೊಂದರಲ್ಲಿ ನೌಕರನಾಗಿದ್ದರು. ಮೃತರು ಸಹೋದರ ಸಹೋದರಿಯರಾದ ಸತೀಶ್ ಕುಮಾರ್, ಸುಮೇಶ್, (ಇಬ್ಬರೂ ಗಲ್ಫ್), ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಘಟನೆ ಬಗ್ಗೆ ಹೊಸದುರ್ಗ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.