ದೇಶಾದ್ಯಂತ ಇಂದು ದೀಪಾವಳಿ ಆಚರಣೆ

ಕಾಸರಗೋಡು: ದೇಶಾದ್ಯಂತ ಇಂದು ದೀಪಾವಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ. ಜನರು ಪರಸ್ಪರ ಸಿಹಿ ಹಂಚಿ, ಹಣತೆ ಬೆಳಗಿಸಿ, ಪಟಾಕಿ ಸಿಡಿಸಿ ದೀಪಾವಳಿ ಹಬ್ಬವನ್ನು ಆಚರಿಸುವರು. ಇಂದಿನಿಂದ ನವೆಂಬರ್ 2ರವರೆಗೆ ದೀಪಾವಳಿ ಆಚರಿಸಲಾಗುತ್ತಿದೆ. ಸಂಪತ್ತಿನ ಪೂಜೆ, ಧನಲಕ್ಷ್ಮಿಯ ಆರಾಧನೆ, ಬಲೀಂದ್ರ ಪೂಜೆ, ಗೋಪೂಜೆ ಮೊದಲಾದ ಅನೇಕ ಆಚರಣೆಗಳನ್ನು ಈ ಸಂದರ್ಭದಲ್ಲಿ ನಡೆಸಲಾಗುತ್ತಿದೆ. ಮುಖ್ಯಮಂತ್ರಿ ಪಿಣರಾಯಿ ವಿಜಯನ್, ರಾಜ್ಯಪಾಲ ಆರೀಫ್ ಮುಹಮ್ಮದ್ ಖಾನ್ ಜನರಿಗೆ ದೀಪಾವಳಿ ಶುಭಾಶಯ ತಿಳಿಸಿದ್ದಾರೆ.

You cannot copy contents of this page