ಯುವಜನಾಂಗ ದಾರಿ ತಪ್ಪದಿರಲು ಧರ್ಮದ ಅರಿವು ಅಗತ್ಯ- ಎಡನೀರು ಶ್ರೀ

ಬದಿಯಡ್ಕ: ವಿಶ್ವಹಿಂದೂ ಪರಿಷತ್ ಬದಿಯಡ್ಕ ಪ್ರಖಂಡದ ನೇತೃತ್ವದಲ್ಲಿ ಬದಿಯಡ್ಕ ಗಣೇಶಮಂ ದಿರದಲ್ಲಿ ಭಾನುವಾರ ಸಂಜೆ ಗೋ ಪೂಜೆ ನಡೆಯಿತು. ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ದೀಪ ಬೆಳಗಿಸಿ ಉದ್ಘಾಟಿಸಿ, ಆಶೀ ರ್ವಚನ ನೀಡಿದರು. ಅವರು ಅನು ಗ್ರಹ ಭಾಷಣದಲ್ಲಿ ಗೋಪೂಜೆಯ ಮೂಲಕ ಗೋವಿನ ಕುರಿತಾದ ಶ್ರದ್ಧೆಯನ್ನು ಮತ್ತಷ್ಟು ಮೈಗೂಡಿಸಿಕೊಳ್ಳುವುದರೊಂದಿಗೆ ಸನಾತನ ಧರ್ಮಕ್ಕೆ ಪೂರಕವಾದ ಹಬ್ಬ ಹರಿದಿನಗಳ ಆಚರಣೆಯನ್ನು ಮಾಡಬೇಕು. ಧನಧಾನ್ಯಗಳನ್ನು ಪೂಜ್ಯಭಾವದಿಂದ ಕಾಣುವ ನಾವು ಪ್ರಕೃತಿಯನ್ನು ಪೂಜಿಸುತ್ತೇವೆ. ಯುವಜನಾಂಗವು ಆಚರಣೆಗಳಲ್ಲಿ ತೊಡಗಿಕೊಂಡಾಗ ಅವರಿಗೆ ಧರ್ಮದ ಅರಿವು ಮೂಡಿಬರುತ್ತದೆ. ಅರಿವಿನ ಕೊರತೆಯಿಂದ ಯುವಜನಾಂಗವು ದಾರಿತಪ್ಪದಂತೆ ನೋಡಿಕೊಳ್ಳಬೇಕು ಎಂದರು. ಲತೇಶ್ ಬಾಕ್ರಬೈಲು ಧಾರ್ಮಿಕ ಉಪನ್ಯಾಸ ನೀಡಿದರು. ವಿಹಿಂಪ ಬದಿಯಡ್ಕ ಪ್ರಖಂಡ ಅಧ್ಯಕ್ಷ ಹರಿಪ್ರಸಾದ ರೈ ಪುತ್ರಕಳ ಅಧ್ಯಕ್ಷತೆ ವಹಿಸಿದ್ದರು. ಕೇರಳ ಪ್ರಾಂತ್ಯ ಕಾರ್ಯದರ್ಶಿ ರಾಜಶೇಖರನ್, ಕರ್ನಾಟಕ ಪ್ರಾಂತ್ಯ ಕಾರ್ಯದರ್ಶಿ ಜಗನ್ನಾಥ ಶಾಸ್ತಿç ಶುಭಾಶಂಸನೆಗೈದರು. ಕಣ್ಣೂರು ವಿಭಾಗ ಸಂಘಟನಾ ಕಾರ್ಯದರ್ಶಿ ಸಂಕಪ್ಪ ಭಂಡಾರಿ ಬಳ್ಳಂಬೆಟ್ಟು, ಸೇವಾಕಾರ್ಯದರ್ಶಿ ಸುರೇಶ್ ಶೆಟ್ಟಿ ಪರಂಕಿಲ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯಾದವ ಕೀರ್ತೇಶ್ವರ ಉಪಸ್ಥಿತರಿದ್ದರು. ವಿಘ್ನೇಶ್ ಬಾಲಗೋಕುಲದ ವಿದ್ಯಾರ್ಥಿನಿಯರು ಪ್ರಾರ್ಥನೆ ಹಾಡಿದರು. ಬದಿಯಡ್ಕ ಪ್ರಖಂಡ ಪ್ರಧಾನ ಕಾರ್ಯದರ್ಶಿ ಮಂಜುನಾಥ ಡಿ. ಮಾನ್ಯ ಸ್ವಾಗತಿಸಿ, ಕಾರ್ಯದರ್ಶಿ ರಮೇಶ್ ಕೃಷ್ಣ ಪದ್ಮಾರು ವಂದಿಸಿದರು. ಶಬರಿಗಿರಿ ಮಹಿಳಾ ಭಜನ ಸಂಘ ಬದಿಯಡ್ಕ ಮತ್ತು ಶ್ರೀ ಪಾರ್ಥಸಾರಥಿ ಮಹಿಳಾ ಭಜನಾ ಸಂಘ ಮುಜುಂಗಾವು ಇವರಿಂದ ಭಜನೆ ಸೇವೆ, ಗೋಪೂಜೆ, ಗೋಗ್ರಾಸ, ಲಕ್ಷಿö್ಮÃ ಗಣೇಶ್ ಕುಣಿತ ಭಜನಾ ಸಂಘ ಗಣೇಶಮಂದಿರ ಇವರಿಂದ ಕುಣಿತ ಭಜನೆ ನಡÉಯಿತು.

Leave a Reply

Your email address will not be published. Required fields are marked *

You cannot copy content of this page