ಯುವಜನ ವಿನಿಮಯ ಕಾರ್ಯಕ್ರಮಕ್ಕೆ ತೆರಳುವ ಜಿಲ್ಲಾ ತಂಡಕ್ಕೆ ಬೀಳ್ಕೊಡುಗೆ
ಕಾಸರಗೋಡು: ಜಿಲ್ಲೆಯಿಂದ ಅಂತಾರಾಜ್ಯ ಯುವಜನ ವಿನಿಮಯ ಕಾರ್ಯಕ್ರಮಕ್ಕೆ ಆಂಧ್ರಪ್ರದೇಶಕ್ಕೆ ತೆರಳುವ ತಂಡಕ್ಕೆ ಬೀಳ್ಕೊಡುಗೆ ನೀಡಲಾಯಿತು.
ಆಂಧ್ರ ಪ್ರದೇಶದ ವಿಜಯವಾಡದಲ್ಲಿ ನಾಳೆಯಿಂದ 9ರವರೆಗೆ ನಡೆಯುವ ಅಂತಾರಾಜ್ಯ ಯುವಜನ ವಿನಿಮಯ ಕಾರ್ಯಕ್ರ ಮದಲ್ಲಿ ಭಾಗವಹಿಸುವುದಕ್ಕಾಗಿ ಜಿಲ್ಲೆಯನ್ನು ಪ್ರತಿನಿಧೀಕರಿಸಿ 7 ಮಂದಿ ಪ್ರಯಾಣ ಹೊರಟಿದ್ದಾರೆ. ಪೂರ ಕ್ಕಳಿಯನ್ನು ಇವರು ಪ್ರಸ್ತುತಪಡಿಸುವರು. ರಾಜ್ಯದ ವಿವಿಧ ಜಿಲ್ಲೆಗಳಿಂದಾಗಿ ಒಟ್ಟು 27 ಯುವಜನ ಪ್ರತಿನಿಧಿಗಳು ಈ ಶಿಬಿರದಲ್ಲಿ ಭಾಗವಹಿಸುತ್ತಿದ್ದಾರೆ. ನೆಹರು ಯುವಕೇಂದ್ರದ ನೇತೃತ್ವದಲ್ಲಿ ಶಿಬಿರ ನಡೆಸಲಾಗುತ್ತಿದೆ.