ಯುವತಿ ನೀಡಿದ ದೂರಿನಿಂದ ಮನನೊಂದ ಯುವಕ ನೇಣು ಬಿಗಿದು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆ
ಕಾಸರಗೋಡು: ಯುವತಿಯೋರ್ವೆ ನೀಡಿದ ದೂರಿನಿಂದ ಮನನೊಂದ ಯುವಕ ನೇಣು ಬಿಗಿದು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಚೆರುವತ್ತೂರು ಕಾವುಂಚಿರದ ಹಳೆ ಮೀನುಗಾರಿಕಾ ಬಂದರಿನ ಸಮೀಪ ನಿಲ್ಲಿಸಿ ಸಿ.ಎ. ಕಣ್ಣನ್- ಜಾನಕಿ ದಂಪತಿ ಪುತ್ರ ಮೀನು ಮಾರಾಟಗಾರರಾಗಿರುವ ಕೆ.ವಿ. ಪ್ರಕಾಶ್ (35) ಸಾವನ್ನಪ್ಪಿದ ಯುವಕ. ಇವರು ನಿನ್ನೆ ಕಾಡಂಗೋಡು ಜೈಹಿಂದ್ ವಾಚನಾಲಯದ ಪಕ್ಕದ ಹಳೆ ಕಟ್ಟಡದಲ್ಲಿ ನೇಣು ಬಿಗಿದು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.ಪ್ರಕಾಶ್ ವಿರುದ್ಧ ಯುವತಿಯೋರ್ವೆ ನಕಲಿ ದೂರು ನೀಡಿದ್ದಳೆಂದೂ, ಅದರಿಂದ ಮನನೊಂದು ಅವರು ಆತ್ಮಹತ್ಯೆ ಗೈದಿರುವುದಾಗಿ ಈ ಬಗ್ಗೆ ಅವರ ಸಹೋದರಿಯ ಪತಿ ಚಂದೇರ ಪೊಲೀಸರಿಗೆ ದೂರು ನೀಡಿದ್ದಾರೆ.
ಮೀನು ವ್ಯಾಪಾರದ ವಿಷಯದಲ್ಲಿ ಪ್ರಕಾಶ್ ಮತ್ತು ಯುವತಿಯೋರ್ವೆ ಮಧ್ಯೆ ಪರಸ್ಪರ ವಾಗ್ವಾದ ಉಂಟಾಗಿತ್ತು. ಅದರ ಹೆಸರಲ್ಲಿ ಆ ಯುವತಿ ಪೊಲೀಸರಿಗೆ ನಕಲಿ ದೂರು ನೀಡಿದ್ದಳೆಂದು ಪ್ರಕಾಶ್ರ ಸಂಬಂಧಿಕರು ಆರೋಪಿಸಿದ್ದಾರೆ. ಈ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಮೃತ ಪ್ರಕಾಶ್ನ ಹೆತ್ತವರ ಹೊರತಾಗಿ ಸಹೋದರ ಸಹೋದರಿಯರಾದ ರತೀಶನ್, ಉಷಾ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.