ಯುವತಿ ನೇಣುಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆ
ಕಾಸರಗೋಡು: ಯುವತಿ ಯೋರ್ವೆ ನೇಣುಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಕಾಸರಗೋಡು ಕಸಬಾ ಕಡಪ್ಪುರದ ಜಯಶೀಲನ್-ಪದ್ಮಿನಿ ದಂಪತಿಯ ಪುತ್ರಿಯೂ, ನೀಲೇಶ್ವರ ತೈಕಡಪ್ಪುರ ಹಾಸ್ಪಿಟಲ್ ರೋಡ್ನ ನಿವಾಸಿಯಾದ ಸನೋಜ್ ಎಂಬವರ ಪತ್ನಿ ಕರಿಶ್ಮಾ (೨೮) ಮೃತ ಯುವತಿ. ನಿನ್ನೆ ಸಂಜೆ ಪತಿಮನೆಯ ಅಡುಗೆ ಕೋಣೆಯ ಪಕ್ಕಾಸಿಗೆ ನೇಣು ಬಿಗಿದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ. ಮೃತರು ಸಹೋದರಿಯರಾದ ಅನಿಶ್ಮಾ, ರೋಶ್ಮಾ ಮೊದಲಾದವರನ್ನು ಅಗಲಿದ್ದಾರೆ.