ಯುವತಿ ನೇಣುಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆ
ಕುಂಬಳೆ: ಯುವತಿಯೋರ್ವೆ ಮನೆಯೊಳಗೆ ನೇಣು ಬಿಗಿದು ಸಾವೀಗೀಡಾದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ನಡೆದಿದೆ.
ಕುಂಟಂಗೇರಡ್ಕದ ವೆಲ್ಫೇರ್ ಶಾಲೆ ಬಳಿಯ ನಿವಾಸಿ ರವಿ ಎಂಬವರ ಪತ್ನಿ ಸುಗಂಧಿ (29) ಸಾವಿಗೀಡಾದ ಯುವತಿ. ಈಕೆ ನಿನ್ನೆ ರಾತ್ರಿ 11 ಗಂಟೆಗೆ ಮನೆಯ ಕೊಠಡಿಯೊಳಗೆ ನೇಣುಬಿಗಿದು ಸಾವಿಗೀಡಾದ ಸ್ಥಿತಿ ಯಲ್ಲಿ ಪತ್ತೆಯಾಗಿದ್ದಾರೆಂದು ತಿಳಿದುಬಂದಿದೆ.
ದಿ| ಫ್ರಾನ್ಸಿಸ್-ವಿಮಲ ದಂಪತಿಯ ಪುತ್ರಿಯಾದ ಸುಗಂಧಿ ಪತಿ, ಪುತ್ರಿ ರಮ್ಯ, ಸಹೋದರಿ ಯರಾದ ಸುಮಂತಿ, ಶೋಭ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಘಟನೆ ಬಗ್ಗೆ ಲಭಿಸಿದ ದೂರಿನಂತೆ ಪೊಲೀಸರು ಸ್ಥಳಕ್ಕೆ ತಲುಪಿದ್ದಾರೆ.