ಯುವ ಕೃಷಿಕನಿಗೆ ಬಿಜೆಪಿಯಿಂದ ಸನ್ಮಾನ
ಕಾಸರಗೋಡು: ಯುವಕರನ್ನು ಕೃಷಿಯತ್ತ ಆಕರ್ಷಿಸುವ ಉದ್ದೇಶದಿಂದ ಬಿಜೆಪಿ ಹೊಸ ಹೆಜ್ಜೆ ಇರಿಸಿದೆ. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರ ಜನ್ಮ ದಿನದ ಸ್ಮರಣಾರ್ಥ ಈ ಕಾರ್ಯಕ್ಕೆ ಚಾಲನೆ ನೀಡಲಾಗಿದ್ದು, ನಗರೀಕರಣ ವಿಪರೀತವಾಗುತ್ತಿರುವ ಈ ಕಾಲದಲ್ಲಿ ಕೃಷಿಯನ್ನೇ ಅವಲಂಬಿಸಿ ಬದುಕುತ್ತಿರುವ ಬೀರಂತಬೈಲು ನಿವಾಸಿ ಯುವಕ ರಂಜಿತ್‌ರನ್ನು ಬಿಜೆಪಿ ಸನ್ಮಾನಿಸಿದೆ. ನಗರಸಮಿತಿ ವತಿಯಿಂದ ನಡೆದ ಕಾರ್ಯಕ್ರದಲ್ಲಿ ಬಿಜೆಪಿಯ ಪ್ರಮುಖರು ಭಾಗವಹಿಸಿದರು.