ಯೂತ್ ಲೀಗ್ ಯೂತ್ ಮಾರ್ಚ್ ಉಪ್ಪಳದಲ್ಲಿ ಸಮಾಪ್ತಿ
ಉಪ್ಪಳ: ಮುಸ್ಲಿಂ ಯೂತ್ ಲೀಗ್ ಜಿಲ್ಲಾ ಸಮಿತಿ ನಡೆಸಿದ ಯೂತ್ ಮಾರ್ಚ್ ಮಂಜೇಶ್ವರ ಮಂಡಲದಲ್ಲಿ ಪರ್ಯಟನೆ ಪೂರ್ತಿಗೊಳಿಸಿ ಉಪ್ಪಳದಲ್ಲಿ ಸಮಾಪ್ತಿಯಾಯಿತು. ಉಪ್ಪಳದಲ್ಲಿ ನಡೆದ ಸಾರ್ವಜನಿಕ ಸಮ್ಮೇಳನವನ್ನು ಮುಸ್ಲಿಂ ಲೀಗ್ ರಾಜ್ಯ ಕಾರ್ಯದರ್ಶಿ ಕೆ.ಎಂ. ಶಾಜಿ ಉದ್ಘಾಟಿಸಿದರು. ಯೂತ್ ಲೀಗ್ ಜಿಲ್ಲಾ ಅಧ್ಯಕ್ಷ ಅಸೀಸ್ ಕಳತ್ತೂರು ಅಧ್ಯಕ್ಷತೆ ವಹಿಸಿದರು. ಪ್ರಧಾನ ಕಾರ್ಯದರ್ಶಿ ಅಸೀಫ್ ಸ್ವಾಗತಿಸಿದರು. ಮುಖಂಡರಾದ ಪಿ.ಕೆ. ಫಿರೋಜ್, ಟಿ.ಪಿ. ಅಶ್ರಫಲಿ, ಸಿ.ಟಿ. ಅಹಮ್ಮದಲಿ, ಕಲ್ಲಟ್ರ ಮಾಹಿನ್ ಹಾಜಿ, ಎ. ಅಬ್ದುಲ್ ರಹಿಮಾನ್, ಅಶ್ರಫ್ ಎಡನೀರು, ಶಾಸಕ ಎಕೆಎಂ ಅಶ್ರಫ್ ಸಹಿತ ಹಲವರು ಭಾಗವಹಿಸಿದರು.