ಯೋಗ ಚಾಂಪಿಯನ್‌ಶಿಪ್‌ನಲ್ಲಿ ಅಷ್ಟಾಂಗ ಯೋಗ ಸೆಂಟರ್‌ಗೆ ತೃತೀಯ ಸ್ಥಾನ

ಕಾಸರಗೋಡು: ಕಾಞಂಗಾಡ್ ಮೇಲಂಗೋತ್‌ನಲ್ಲಿ ನಡೆದ ೯ನೇ ಜಿಲ್ಲಾ ಯೋಗಾಸನ ಸ್ಪೋರ್ಟ್ಸ್ ಚಾಂಪಿಯನ್‌ಶಿಪ್‌ನಲ್ಲಿ ಕರಂದಕ್ಕಾಡ್ ಅಷ್ಟಾಂಗ ಯೋಗ ಸೆಂಟರ್ ಮೂರನೇ ಸ್ಥಾನ ಗಳಿಸಿದೆ. ಸಬ್ ಜ್ಯೂನಿಯರ್ ವಿಭಾಗದಲ್ಲಿ ಇಲ್ಲಿನ ವಿದ್ಯಾರ್ಥಿಗಳಾದ ಸಮೀಕ್ಷಾ ಕೆ. ತೃತೀಯ ಸ್ಥಾನ , ಧ್ಯಾನ್ ಜಿ. ದ್ವಿತೀಯ ಸ್ಥಾನ, ನಿಹಾರಿಕ ಎಸ್. ತೃತೀಯ ಸ್ಥಾನ, ವೈಭವ್ ಸಿ.ಕೆ ತೃತೀಯ ಸ್ಥಾನ ಪಡೆದಿದ್ದಾರೆ. ಜ್ಯೂನಿಯರ್ ವಿಭಾ ಗದಲ್ಲಿ ರಾಮನಾಥ ಶೆಣೈ ದ್ವಿತೀಯ ಸ್ಥಾನ ಹಾಗೂ ಆರ್ಟಿಸ್ಟಿಕ್ ಸೋಲೊ ವಿಭಾಗದಲ್ಲಿ, ಆರ್ಟಿಸ್ಟಿಕ್ ಪೆಯರ್ ವಿಭಾಗದಲ್ಲಿ ಪ್ರಥಮ ಸ್ಥಾನ, ಅನ್ವಿತ್ ಶೆಟ್ಟಿ ಎ. ಜ್ಯೂನಿಯರ್ ವಿಭಾಗದಲ್ಲಿ ಪ್ರಥಮ ಸ್ಥಾನ, ಆರ್ಟಿಸ್ಟಿಕ್ ಸೋಲೊ ದಲ್ಲಿ ದ್ವಿತೀಯ ಸ್ಥಾನ, ಆರ್ಟಿಸ್ಟಿಕ್ ಪೆಯರ್‌ನಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾರೆ. ಇವರು ಕಲ್ಲಿಕೋಟೆಯಲ್ಲಿ ಜರಗುವ ರಾಜ್ಯಮಟ್ಟದ ಯೋಗಾಸನ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ಇವರಿಗೆ ಅಷ್ಟಾಂಗ ಯೋಗ ಸೆಂಟರ್‌ನ ಶಿಕ್ಷಕಿ ಮಮತಾ ಸುರೇಶ್ ತರಬೇತಿ ನೀಡಿದ್ದಾರೆ.

You cannot copy contents of this page