ರಂಜಿತ್ ಶ್ರೀನಿವಾಸನ್ ಕೊಲೆ ಪ್ರಕರಣ: ತೀರ್ಪು ನೀಡಿದ ನ್ಯಾಯಾಧೀಶರಿಗೆ ಬೆದರಿಕೆ; ನಾಲ್ಕು ಮಂದಿ ಸೆರೆ
ಆಲಪ್ಪುಳ: ಒಬಿಸಿ ಮೋರ್ಚಾ ರಾಜ್ಯಕಾರ್ಯದರ್ಶಿ ನ್ಯಾಯವಾದಿ ರಂಜಿತ್ ಶ್ರೀನಿವಾಸನ್‌ರನ್ನು ಕೊಲೆಗೈದ ಪ್ರಕರಣದಲ್ಲಿ ಆರೋಪಿಗಳಿಗೆ ಶಿಕ್ಷೆ ಘೋಷಿಸಿದ ಮಾವೇಲಿಕ್ಕರ ಅಡಿಶನಲ್ ಸೆಶನ್ಸ್ ನ್ಯಾಯಾಧೀಶರಾದ ಶ್ರೀದೇವಿಯವರ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನ ಹಾಗೂ ಬೆದರಿಕೆಯೊಡ್ಡಿದ ನಾಲ್ಕು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ಮಣ್ಣಂಚೇರಿ ಪಂಚಾಯತ್ ವ್ಯಾಪ್ತಿಯ ಕುಂಬಳತ್ತು ವೆಳಿ ವೀಟಿಲ್‌ನ ನಸೀರ್ ಮೋನ್ (೪೭), ತಿರುವನಂತಪುರದ ಮಂಗಲಪುರಂ ಸಕೀರ್ ಮಂಜಿಲ್‌ನ ರಾಫಿ (೩೮), ಮಣ್ಣಂಚೇರಿ ಪೊನ್ನಾಡ್ ತೇವರಂಶೇರಿ ನವಾಸ್ ನೈನ (೪೨), ಅಂಬಲಪ್ಪುಳ ವಡಕ್ಕ್ ವಿಲ್ಲೇಜ್‌ನಲ್ಲಿ ವಡಾನಂ ಪುದುವಲ್ ವೀಟಿಲ್ ಶಾಜಹಾನ್ (೩೬) ಎಂಬಿವರು ಬಂಧಿತ ಆರೋಪಿಗಳಾಗಿದ್ದಾರೆ. ಆರೋಪಿಗಳ ಪೈಕಿ ನವಾಸ್‌ನೈನ ಮಣ್ಣಂಚೇರಿ ಗ್ರಾಮ ಪಂಚಾಯತ್‌ನ ಎಸ್.ಡಿ.ಪಿ.ಐ. ಸದಸ್ಯನಾಗಿದ್ದಾನೆ. ಮತ ಸಾಮಾದಾಯಿಕ ರಾಜಕೀಯ ದ್ವೇಷ ಮಂಡಿಸುವ ಹಾಗೂ ಗಲಭೆ ಸೃಷ್ಟಿಸುವ ರೀತಿಯಲ್ಲಿ ಚಿತ್ರಗಳು, ಹೇಳಿಕೆಗಳನ್ನು ರವಾನಿಸಿದ ಆರೋಪದಂತೆ ೧೩ ಮಂದಿ ವಿರುದ್ಧ ತನಿಖೆ ನಡೆಸಲಾಗಿತ್ತು. ಅಲ್ಲದೆ ಈ ಸಂಬಂಧ ಆಲಪ್ಪುಳ ಜಿಲ್ಲೆಯಲ್ಲಿ ಐದು ಕೇಸುಗಳನ್ನು ದಾಖಲಿಸಲಾಗಿದೆ. ಇದರಲ್ಲಿ ನಾಲ್ಕು ಕೇಸು ದಾಖಲಿಸಲಾಗಿದೆ. ತನಿಖೆಗಾಗಿ ಪ್ರತ್ಯೇಕ ತಂಡವನ್ನು ನಿರ್ಮಿಸಲಾಗಿದೆ.
ಸಾಮಾಜಿಕ ತಾಣಗಳಲ್ಲಿ ದ್ವೇಷ ಹುಟ್ಟಿಸುವ ಹೇಳಿಕೆಗಳಲ್ಲಿ ಪ್ರಚಾರ ನಡೆಸುವವರನ್ನು ಪತ್ತೆಹಚ್ಚಲು ಸೈಬರ್ ಪೊಲೀಸ್ ತೀವ್ರ ನಿಗಾ ಇರಿಸಿದೆ ಯೆಂದು ಪೊಲೀಸ್ ಮೂಲಗಳು ತಿಳಿಸಿವೆ.