ರಬ್ಬರ್ ಟ್ಯಾಪಿಂಗ್ ಕಾರ್ಮಿಕ ಬಾಡಿಗೆ ಮನೆಯಲ್ಲಿ ಸಾವು
ಮುಳ್ಳೇರಿಯ: ಮುಳ್ಳೇರಿಯದ ಬಾಡಿಗೆ ಮನೆ ಯಲ್ಲಿ ವಾಸಿಸು ತ್ತಿದ್ದ ರಬ್ಬರ್ ಟ್ಯಾಪಿಂಗ್ ಕಾರ್ಮಿಕ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ನೀಲೇಶ್ವರ ಪರಪ್ಪ ಪನ್ನಿಯೆರಿಂಞ ಕೊಲ್ಲಿ ನಿವಾಸಿ ಅಬ್ರಾಹಂರ ಪುತ್ರ ಕುರ್ಯಾಚ್ಚನ್ (53) ಮೃತ ವ್ಯಕ್ತಿ. ಕರ್ಮಂತೋಡಿ ಬಳಿ ಕೊಟ್ಟಂಗುಳಿಯಲ್ಲಿ ರಬ್ಬರ್ ಟ್ಯಾಪಿಂಗ್ ನಡೆಸುತ್ತಿದ್ದರು. ಮೃತರು ಪತ್ನಿ ಗ್ರೇಸಿ ಸಹಿತ ಬಂಧು ಮಿತ್ರರನ್ನು ಅಗಲಿದ್ದಾರೆ.